ಕರ್ನಾಟಕ

ದನದ ಮಾಂಸದ ತ್ಯಾಜ್ಯ ಸುರಿಯುತ್ತಿವುದನ್ನು ಪ್ರಶ್ನೆ ಮಾಡಿದ ಬಿಜೆಪಿ ಮುಖಂಡನ ಮೇಲೆ ಹಲ್ಲೆ !

Pinterest LinkedIn Tumblr


ದನದ ಮಾಂಸದ ತ್ಯಾಜ್ಯ ಸುರಿಯುತ್ತಿರೋದನ್ನು ಪ್ರಶ್ನೆ ಮಾಡಿದ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಅರುಣ್ ಗೌಡ ಮೇಲೆ ಹಲ್ಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಖಾಸಗಿ ಜಾಗಕ್ಕೆ ನುಗ್ಗಿ ದಾಂಧಲೆ ಮಾಡಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ. ಕೋಟೆ ರಸ್ತೆಯ ನಾಚನಹಳ್ಳಿ ಪಾಳ್ಯ ಬಳಿ ಕಳೆದ ರಾತ್ರಿ ತಮ್ಮ ಖಾಸಗಿ ಜಾಗದಿಂದ ಅರುಣ್​​​ ನಿರ್ಗಮಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳ ಗುಂಪು ಅರುಣ್ ಗೌಡ ಹಾಗೂ ಬೆಂಬಲಿಗರ ಮೇಲೆ ಅಟ್ಯಾಕ್ ಮಾಡಿದೆ.

ಹಲ್ಲೆಗೊಳಗಾದ ಅರುಣ್ ಗೌಡರನ್ನು ಬೆಂಬಲಿಗರು ರಕ್ಷಣೆ ಮಾಡಿ ಕರೆದೊಯ್ಯುತ್ತಿದ್ದಂತೆ 50ಕ್ಕೂ ಹೆಚ್ಚು ಮಂದಿಯಿದ್ದ ಗ್ಯಾಂಗ್ ಮಚ್ಚು, ಲಾಂಗ್, ಕಬ್ಬಿಣದ ರಾಡ್ ಗಳನ್ನು ಹಿಡಿದು ಅರುಣ್ ಗೌಡಗೆ ಸೇರಿದ ಜಾಗಕ್ಕೆ ನುಗ್ಗಿ ಅಡುಗೆ ಮನೆ ದ್ವಂಸ ಮಾಡಿದ್ದಾರೆ.

ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುಗಳನ್ನ ಹಾಕಿ ಪುಂಡಾಟ ನಡೆಸಿದೆ. ಬೆಂಗಳೂರಿನ‌ ಕೆ.ಜಿ. ಹಳ್ಳಿಯಲ್ಲಿ ನಡೆದ ಘಟನೆಯ ಮಾದರಿಯಲ್ಲೇ ಪುಂಡರ ಗ್ಯಾಂಗ್ ಅಟ್ಯಾಕ್​​ ಮಾಡಿದೆ.

ಭಯಾನಕ ದಾಂಧಲೆ ಸಿಸಿಟಿವಿಯಲ್ಲಿ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಅಶೋಕಪುರಂ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿ‌ ದಾಂಧಲೆ ಮಾಡಿದ ದುಷ್ಕರ್ಮಿಗಳ ಹುಡುಕಾಟ ನಡೆಸಿದ್ದಾರೆ.

Comments are closed.