
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ತನ್ನನ್ನು ರಕ್ಷಿಸಿದ ಕಾರಣಕ್ಕೆ ಆಸ್ಪತ್ರೆಯ ಐಸಿಯು ಪುಡಿಪುಡಿ ಮಾಡಿದ ವಿಚಿತ್ರ ಘಟನೆ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.
ಗ್ಲಾಸ್, ಐಸಿಯು ಮಾನಿಟರ್ಗಳನ್ನು ಒಡೆದು ಹಾಕಿದ್ದಾನೆ. ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ತಾರಗೋಡು ಗ್ರಾಮದ ಗುಡ್ಡೆಕೊಪ್ಪ ಊರಿನ ಪ್ರಕಾಶ್ ಎಂಬಾತನನ್ನು ದಾಖಲಿಸಲಾಗಿತ್ತು. ಕಳೆದ ಬುಧವಾರ ಬೆಳಿಗ್ಗೆ ವಿಷ ಸೇವಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ಅಲ್ಲಿಂದ ರೋಟರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಒಂದೂವರೆ ದಿನಗಳಿಂದ ರೋಟರಿ ಐಸಿಯುನಲ್ಲಿದ್ದ ರೋಗಿ, ಒಮ್ಮೆಲೆ ರೊಚ್ಚಿಗೆದ್ದು ಕೈಗೆ ಗ್ಲೂಕೋಸ್ ಅಳವಡಿಸಿದ್ದ ರಾಡ್ನಿಂದ ಐಸಿಯುನ ಮಾನಿಟರ್, ರಕ್ತ ಪರೀಕ್ಷಾ ಕೇಂದ್ರದ ಮೈಕ್ರೋಸ್ಕೋಪ್, ಬಾಗಿಲು, ಅಲ್ಲದೇ ಆಸ್ಪತ್ರೆಯ ಹಲವು ಗ್ಲಾಸ್ಗಳನ್ನು ಒಡೆದು ಹಾಕಿದ್ದಾನೆ.
ರಾಡ್ ಹಿಡಿದು ರಸ್ತೆಯವರೆಗೆ ರೋಗಿ ಓಡಿ ಬಂದಿದ್ದು, ನಂತರ ಸಿಬ್ಬಂದಿ ಹಿಡಿದು ಕೈ ಕಾಲು ಕಟ್ಟಿ ಹಾಕಿದ್ದಾರೆ. ನರ್ಸ್ ಸೇರಿದಂತೆ ಸಿಬ್ಬಂದಿಗೆ ಹಲ್ಲೆ ಮಾಡಿಲ್ಲ. ಈ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.