ಕರ್ನಾಟಕ

ವಿವಾಹಿತ ಮಹಿಳೆಯನ್ನು ಕರೆದೊಯ್ದ ಪೊಲೀಸಪ್ಪ: ಹೆಂಡತಿಗಾಗಿ ಸಂತ್ರಸ್ತ ಪತಿಯ ಅಳಲು!

Pinterest LinkedIn Tumblr


ಮಂಡ್ಯ: ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿರುವ ಆರೋಪ ಪೊಲೀಸ್​ ಕಾನ್ಸ್​ಟೇಬಲ್ ವಿರುದ್ಧ ಕೇಳಿಬಂದಿದೆ. ​

ಹಲಗೂರು ಪೊಲೀಸ್ ಠಾಣೆಯ ಪೇದೆ ಹರೀಶ್ ವಿರುದ್ದ ಪ್ರಕರಣ ದಾಖಲಾಗಿದೆ. ಪತ್ನಿ ಕಳೆದುಕೊಂಡ ಕೊಳ್ಳೆಗಾಲ ತಾಲೂಕಿನ ಮಳ್ಳೂರು ಗ್ರಾಮದ ಸಂತ್ರಸ್ತ ಪತಿ ನಾಗರಾಜು ಮಂಡ್ಯ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ತನ್ನ ಹೆಂಡತಿ ಶಿಲ್ಪಾಳನ್ನು ಪೇದೆ ಹರೀಶ್ ಪುಲಾಯಿಸಿ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಬ್ಲಾಕ್​ಮೇಲ್ ಮಾಡಿ ಬಲವಂತವಾಗಿ ತನ್ನೊಂದಿಗೆ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ನಾಗರಾಜು, ಪೇದೆಯಿಂದ ತನ್ನ ಹೆಂಡತಿಯನ್ನ ಬಿಡಿಸಿಕೊಡುವಂತೆ ಮಂಡ್ಯ ಎಸ್ಪಿಗೆ ಮನವಿ ಮಾಡಿದ್ದಾರೆ.

Comments are closed.