
ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ವಿಶ್ವವಿಖ್ಯಾತ ಜೋಗಕ್ಕೆ ತೆರಳಿದ್ದ ವ್ಯಕ್ತಿ, ಇದೀಗ ವಾಪಸ್ ಆಗಿದ್ದಾರೆ. ಅದಕ್ಕೆ ಕಾರಣ ಪೊಲೀಸರು..!
ಬೆಂಗಳೂರು ಇಂದಿರಾನಗರದ ಚೇತನ್ ಕುಮಾರ್(34) ರಾಣಿ ಫಾಲ್ಸ್ನಿಂದ ಕೆಳಗೆ ಬೀಳಲು ಯತ್ನಿಸುತ್ತಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ ಇದೀಗ ಆತನ ಜೀವ ಉಳಿದಿದೆ.
ಎಂಬಿಎ ಪದವೀಧರನಾದ ಚೇತನ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲೆಂದು ಜೋಗಕ್ಕೆ ಹೋಗಿ, ರಾಣಿ ಫಾಲ್ಸ್ನ ಮೇಲ್ಭಾಗಕ್ಕೆ ತೆರಳಿ ಕುಳಿತಿದ್ದರು.
ಆತನನ್ನು ನೋಡಿದ ಜೋಗ ಪೊಲೀಸರು, ಸಾಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ, ಅಗ್ನಿಶಾಮಕದಳದವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಹಾಗೇ, ಅವರು ಬರುವವರೆಗೆ ಅಲ್ಲಿಯೇ ಇದ್ದು ಕಾಯುತ್ತಿದ್ದರು. ನಂತರ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸೇರಿ ಚೇತನ್ ಅವರ ಮನವೊಲಿಸಿ, ವಾಪಸ್ ಕರೆತಂದಿದ್ದಾರೆ.
ಚೇತನ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.