ಗದಗ: ತಲೆನೋವು ತಾಳಲಾರದೇ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಗದಗದಲ್ಲಿ ಗುರುವಾರ ನಡೆದಿದೆ.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಣಕಾರ ಓಣಿ ನಿವಾಸಿ ಲಕ್ಷ್ಮಿ ಗಣಮುಖಿ (22) ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇಣಿಗೆ ಕೊರಳೊಡ್ಡಿದ್ದಾಳೆ. ಹೊರ ಹೋಗಿದ್ದ ಪಾಲಕರು ಮನೆ ಬಂದ ಬಳಿಕ ಮಗಳ ಸ್ಥಿತಿ ನೋಡಿ ಆಘಾತಕ್ಕೊಳಗಾಗಿದ್ದಲ್ಲದೇ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾಕಷ್ಟು ಬಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೂ ತಲೆನೋವು ಕಡಿಮೆಯಾಗಿರಲಿಲ್ಲ. ನನ್ನ ಆರೋಗ್ಯ ಸರಿ ಹೋಗುವುದೇ ಇಲ್ಲ ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡು ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳಕ್ಕೆ ಮುಳಗುಂದ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.