ರಾಷ್ಟ್ರೀಯ

ಅಮಿತ್​ ಷಾ ಕೊರೋನಾ ಪರೀಕ್ಷೆ ಫಲಿತಾಂಶ ಬಹಿರಂಗ…

Pinterest LinkedIn Tumblr


ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕೋವಿಡ್ ಸೋಂಕಿನ ಗುಣಲಕ್ಷಣಗಳು ಕಂಡುಬಂದ ಕಾರಣ ಅವರು ಟೆಸ್ಟ್ ಮಾಡಿಸಿಕೊಂಡು ಕ್ವಾರಂಟೈನ್​ಗೆ ಹೋಗಿದ್ದು. ಶುಕ್ರವಾರ ಕೋವಿಡ್ 19 ಟೆಸ್ಟ್​ನ ಫಲಿತಾಂಶ ಬಂದಿದ್ದು, ಇನ್ನೂ ಕೆಲವು ದಿನಗಳ ಕಾಲ ಕ್ವಾರಂಟೈನ್​ ನಲ್ಲಿ ಇರುವುದಾಗಿ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಟ್ವೀಟ್ ಮೂಲಕ ಷಾ ಹೇಳಿರುವುದಿಷ್ಟು- ನಾನು ಇಂದು ಮನೆಯಲ್ಲಿದ್ದೇನೆ. ಕೋವಿಡ್ 19 ಟೆಸ್ಟ್ ನೆಗೆಟಿವ್ ಬಂದಿದೆ. ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ, ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಡಾಕ್ಟರ್​ ಸಲಹೆ ಪ್ರಕಾರ ಇನ್ನೂ ಕೆಲವು ದಿನಗಳ ಕಾಲ ಹೋಮ್ ಐಸೋಲೇಷನ್​ಗೆ ಒಳಗಾಗಲಿದ್ದೇನೆ.

ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ಎಲ್ಲ ಡಾಕ್ಟರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಮತ್ತು ನೆರವು ನೀಡಿದವರಿಗೆ ಎಲ್ಲರಿಗೂ ಧನ್ಯವಾದಗಳನ್ನೂ ಅಮಿತ್ ಷಾ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.

Comments are closed.