ಕರ್ನಾಟಕ

ಡಿಜೆ ಹಳ್ಳಿ ಗಲಭೆ ಪ್ರಕರಣದ ಸೂತ್ರಧಾರ ಕಲೀಲ್ ಪಾಷ ಅರೆಸ್ಟ್

Pinterest LinkedIn Tumblr


ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷ ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಮ್ ಪತಿ ಆರೋಪಿ ಕಲೀಂ ಗಲಾಟೆಗೂ ಮೊದಲೇ ಪೊಲೀಸ್ ಠಾಣೆ ಮುಂದೆ ಬಂದಿದ್ದ. ಅಲ್ಲಿ ಎಲ್ಲರನ್ನೂ ಪ್ರಚೋದಿಸಿದ್ದ. ಗಲಾಟೆ ಶುರುವಾಗ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದ. ಗಲಾಟೆ ಬಳಿಕ ಮತ್ತೆ ಠಾಣೆ ಬಳಿ ಬಂದು ಪೊಲೀಸರಿಗೆ ಸಹಕರಿಸುವಂತೆ ನಟಿಸಿದ್ದ. ತನಿಖೆ ವೇಳೆ ಘಟನೆಗೆ ಕಾರ್ಪೊರೇಟರ್ ಪತಿ ಪಾತ್ರ ಕಂಡು ಬಂದಿದ್ದ ಹಿನ್ನಲೆ ಬಂಧಿಸಲಾಗಿದೆ.

89 ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್
ರಾತ್ರೋರಾತ್ರಿ 89 ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕೆಎಸ್​ಆರ್​ಟಿಸಿ ಮುಖಾಂತರ ಸಿಸಿಬಿ ಹಾಗೂ ಕೆಎಸ್​ಆರ್​​ಪಿ ಭದ್ರತೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಆರೋಪಿಗಳು ಬೆಂಗಳೂರಲ್ಲೇ ಇದ್ರೆ ಗಲಾಟೆ ಸಾಧ್ಯತೆ ಇರುವುದರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ 89 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

Comments are closed.