ಕರ್ನಾಟಕ

ಈ ವರ್ಷ ರೈತನಿಗೆ ಕೈಕೊಟ್ಟ ಮುಂಗಾರು ಮಳೆ

Pinterest LinkedIn Tumblr


ಕೊಡಗು, ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಇಷ್ಟೊತ್ತಿಗಾಗಲೇ ಸರಾಸರಿಯಾಗಿ 4.5 ರಿಂದ 5 ಸಾವಿರ ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಶೇ.60ರಷ್ಟು ಮಳೆಯಾಗಿಲ್ಲ. ಇನ್ನೂಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಇನ್ನೂ ಉತ್ತರ ಒಳನಾಡು ಪ್ರದೇಶಗಳ ಪೈಕಿ ಬೆಳಗಾವಿ ಅತಿಹೆಚ್ಚಿನ ಮಳೆ ಬೀಳುವ ಪ್ರದೇಶ. ಆದರೆ, ಈ ವರ್ಷ ಮುಂಗಾರು ಕೈಕೊಟ್ಟಿದ್ದು ಈವರೆಗೆ ಶೇ.50ರಷ್ಟು ಮಳೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಯಾದಗಿರಿ, ಕೊಪ್ಪಳ ಮತ್ತು ರಾಯಚೂರು ಪ್ರದೇಶಗಳಲ್ಲಿ ಈ ವರ್ಷ ನಿಗದಿಗಿಂತ ಉತ್ತಮ ಮಳೆಯಾಗಿರುವುದು ಸಾಮಾನ್ಯವಾಗಿ ಈ ಭಾಗದ ರೈತರಿಗೆ ಖುಷಿ ನೀಡಿದೆ.

ಕರ್ನಾಟಕದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ- 1,819 ಅಡಿಇಂದಿನ ಮಟ್ಟ- 1,770.90 ಅಡಿ
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
ಇಂದಿನ ನೀರು ಸಂಗ್ರಹ- 40.85 ಟಿಎಂಸಿಇಂದಿನ ಒಳಹರಿವು- 4,614ಕ್ಯೂಸೆಕ್ಸ್​
ಇಂದಿನ ಹೊರ ಹರಿವು-6861 ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ- 1,949.50 ಅಡಿ
ಇಂದಿನ ಮಟ್ಟ- 1,891.51 ಅಡಿ
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ-6.80 ಟಿಎಂಸಿ
ಇಂದಿನ ಒಳಹರಿವು- 367ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 367ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 2,859 ಅಡಿ
ಇಂದಿನ ಮಟ್ಟ- 2855.48 ಅಡಿ
ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
ಇಂದಿನ ನೀರು ಸಂಗ್ರಹ-7.31 ಟಿಎಂಸಿ
ಇಂದಿನ ಒಳಹರಿವು- 1402 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 320ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ- 2,922 ಅಡಿ
ಇಂದಿನ ಮಟ್ಟ- 2895.33 ಅಡಿ
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 17.05 ಟಿಎಂಸಿ
ಇಂದಿನ ಒಳಹರಿವು- 2,625 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ
ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 107.72 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 29.49 ಟಿಎಂಸಿ
ಇಂದಿನ ಒಳಹರಿವು- 5438ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 5089 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ- 2,284 ಅಡಿ
ಇಂದಿನ ಮಟ್ಟ- 2276.70 ಅಡಿ
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ-15.20 ಟಿಎಂಸಿ
ಇಂದಿನ ಒಳಹರಿವು- 3250 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1500 ಕ್ಯೂಸೆಕ್ಸ್​

ತುಂಗಾ ಜಲಾಶಯ
ಗರಿಷ್ಠ ಮಟ್ಟ- 1,633 ಅಡಿ
ಇಂದಿನ ಮಟ್ಟ- 1,610.16 ಅಡಿ
ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
ಇಂದಿನ ನೀರು ಸಂಗ್ರಹ- 35.55 ಟಿಎಂಸಿ
ಇಂದಿನ ಒಳಹರಿವು- 14,285 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 288 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2,175 ಅಡಿ
ಇಂದಿನ ಮಟ್ಟ- 2,138.00 ಅಡಿ
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 25.41ಟಿಎಂಸಿ
ಇಂದಿನ ಒಳಹರಿವು- 4977ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 122 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2060.15 ಅಡಿ
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 16.69 ಟಿಎಂಸಿ
ಇಂದಿನ ಒಳಹರಿವು- 1,576ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 164ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 1,704 ಅಡಿ
ಇಂದಿನ ಮಟ್ಟ- 1,696.77 ಅಡಿ
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 8634 ಟಿಎಂಸಿ
ಇಂದಿನ ಒಳಹರಿವು- 29038 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 46,746 ಕ್ಯೂಸೆಕ್ಸ್​

Comments are closed.