ಕರ್ನಾಟಕ

ಕೊರೋನಾ ಸೋಂಕಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಲಿ

Pinterest LinkedIn Tumblr


ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ‌ ಕೊರೋನಾ ಸೋಂಕಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಲಿಯಾಗಿದ್ದಾರೆ.

ಜಿಲ್ಲೆಯ ಶಹಾಬಾದ್‌ ತಾಲ್ಲೂಕಿನ ಮರತೂರು ಪಂಚಾಯತ್ ನ 58 ವರ್ಷದ ಅಭಿವೃದ್ಧಿ ಅಧಿಕಾರಿ ಸೋಂಕಿನಿಂದ ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಜು. 17ರಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟ‌ ಹಿನ್ನಲೆಯಲ್ಲಿ ಜಿಮ್ಸ್‌ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಹೃದ್ರೋಗ ಚಿಕಿತ್ಸೆಗೂ ಒಳಗಾಗಿದ್ದರು ಎನ್ನಲಾಗಿದೆ.

ಹೊನಗುಂಟ ಪಂಚಾಯತ್ ನಲ್ಲಿ 9, ಮರತೂರಿನಲ್ಲಿ 11 ಸಿಬ್ಬಂದಿ ಇವರ ಜೊತೆಗೂಡಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಇದೂವರೆಗೆ ಯಾರೊಬ್ಬರಿಗೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.

Comments are closed.