ಕರ್ನಾಟಕ

ಭಾರೀ ವೈರಲ್​​ ಅದ ಆನೆಯನ್ನು ಅಟ್ಟಾಡಿಸಿದ ಎಮ್ಮೆ ವಿಡಿಯೋ

Pinterest LinkedIn Tumblr


ಬೆಂಗಳೂರು(ಜು.24): ದೊಡ್ಡ ಗಾತ್ರದ ಆನೆಯೊಂದನ್ನು ಸಣ್ಣ ಪ್ರಾಣಿಯೊಂದು ಅಟ್ಟಾಡಿಸಿರುವ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಎಮ್ಮೆಯೊಂದು ಆನೆಯನ್ನು ಅಟ್ಟಾಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಎಮ್ಮೆ ತನ್ನನ್ನು ಏನು ಮಾಡಿಬಿಡುತ್ತದೋ? ಎಂದು ಹೆದರಿ ಆನೆ ಎರಡೆಜ್ಜೆ ಹಿಂದೆ ಇಟ್ಟಿರುವುದು ವಿಡಿಯೋದಲ್ಲಿ ಎದ್ದು ಕಾಣುತ್ತದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​​ ನಂದಾ ಎಂಬುವರು ಈ ವಿಡಿಯೋ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ಧಾರೆ. ಜೀವಕ್ಕಿಂತಲೂ ಮುಖ್ಯವಾದದ್ದು ಧೈರ್ಯ ಎಂಬ ಕ್ಯಾಪ್ಷನ್​​​​​ ನೀಡಿ ಈ ವಿಡಿಯೋ ಪೋಸ್ಟ್​​ ಮಾಡಲಾಗಿದೆ. 20 ಸೆಕೆಂಡ್‌ನ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ದೇಶದ ಗಮನ ಸೆಳೆಯುತ್ತಿದೆ. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ನೋಡಿದ್ಧಾರೆ.

Comments are closed.