ಬೆಂಗಳೂರು (ಜುಲೈ 24); ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ ಒಂದೇ ಕುಟುಂಬದ ಮೂವರಿಗೆ ಕೊರೋನಾ ತಗುಲಿತ್ತು. ಆದರೆ, ಸೂಕ್ತ ಚಿಕಿತ್ಸೆ ಸಿಗದೆ ಮೂವರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49 ವರ್ಷದ ಮಾವ ಮೂವರು ಇದೀಗ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಆರೋಗ್ಯಧಿಕಾರಿಯ ಮಾವ ಸಹ ವೈದ್ಯರಾಗಿದ್ದರು. ಆದರೆ, ಕೊರೋನಾ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಆಸ್ಪತ್ರೆ ಸಿಬ್ಬಂದಿಗಳು ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ವೈದ್ಯರು, ಆರೋಗ್ಯಧಿಕಾರಿಯ ಕುಟುಂಬದವರಿಗೆ ಹೀಗಾದರೆ ಇನ್ನೂ ಜನ ಸಾಮಾನ್ಯರ ಪಾಡೇನು..? ಎಂಬ ಪ್ರಶ್ನೆ ಇದೀಗ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
Comments are closed.