ರಾಷ್ಟ್ರೀಯ

ಗುಣಮುಖರಾಗಿದ್ದ ದೆಹಲಿ ಪೊಲೀಸ್ ಗೆ ಮತ್ತೆ ಕೊರೋನಾ

Pinterest LinkedIn Tumblr


ನವದೆಹಲಿ: ಮಹಾಮಾರಿ ಕೊರೋನಾವೈರಸ್ ಗೆ ತುತ್ತಾಗಿ ಚೇತರಿಸಿಕೊಂಡಿದ್ದ ದೆಹಲಿ ಪೊಲೀಸ್ ಮತ್ತೆ ಕೊರೋನಾ ವಕ್ಕರಿಸಿದ್ದು ತಜ್ಞರು ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಪ್ರಕರಣ ಚೇತರಿಸಿಕೊಂಡಿದ್ದ ರೋಗಿಯು ಮತ್ತೆ ಸೋಂಕಿಗೆ ಒಳಗಾಗಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮೇ ತಿಂಗಳಲ್ಲಿ 50 ವರ್ಷದ ಪೊಲೀಸ್ ಒಬ್ಬರಿಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಮೇ 15ರಿಂದ 22ರವರೆಗೆ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಸಂಪೂರ್ಣ ಚಿಕಿತ್ಸೆ ಪಡೆದು ನೆಗೆಟಿವ್ ಬಂದ ನಂತರ ಪೊಲೀಸ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಜುಲೈ 10 ರಂದು ಅವರಿಗೆ ಮತ್ತೆ ಜ್ವರ ಮತ್ತು ಒಣ ಕೆಮ್ಮಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಜುಲೈ 13ರಂದು ಸ್ವತಃ ಕೊರೋನಾ ಪರೀಕ್ಷೆಗೆ ಒಳಗಾದರು.

ಕ್ಷಿಪ್ರ ಆಂಟಿಜೆನ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಅಪೊಲೊ ಆಸ್ಪತ್ರೆಗಳ ಉಸಿರಾಟ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಹಿರಿಯ ಸಲಹೆಗಾರ ಡಾ.ರಾಜೇಶ್ ಚಾವ್ಲಾ ಹೇಳಿದ್ದಾರೆ.

ಮೊದಲು ಕೊರೋನಾಗೆ ತುತ್ತಾಗಿದ್ದಾಗ ಅವರಿಗೆ ಯಾವುದೇ ರೀತಿಯ ಲಕ್ಷಣಗಳಿರಲಿಲ್ಲ. ಆದರೆ ಎರಡನೇ ಬಾರಿಗೆ ಕೊರೋನಾಗೆ ತುತ್ತಾಗಿರುವ ಪೊಲೀಸ್ ಅವರಲ್ಲಿ ಶಕ್ತಿ ನಿರೋಧಕ ಕಡಿಮೆ ಇರುವುದು ಕಂಡು ಬಂದಿದೆ. ಹೀಗಾಗಿ ಅವರಿಗೆ ತೀವ್ರಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.