ಕರ್ನಾಟಕ

ಫೇಸ್​ಬುಕ್​ ಲೈವ್​ ನಲ್ಲಿ ಹೆಂಡತಿ ಎದುರಲ್ಲೇ ವ್ಯಕ್ತಿ ಆತ್ಮಹತ್ಯೆ

Pinterest LinkedIn Tumblr


ಕೊಯಮತ್ತೂರು: ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಲೈವ್​ ಸೂಸೈಡ್​ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬುಧವಾರ ನಡೆದಿದೆ.

ಮೃತ ವ್ಯಕ್ತಿಯನ್ನು ರಾಮ್​ಕುಮಾರ್​ (37) ಎಂದು ಗುರುತಿಸಲಾಗಿದೆ. ಈತ ತಿರುಪುರ್​ ಜಿಲ್ಲೆಯ ಧರಪುರಂ ಬಳಿಯ ಚಿನ್ನರವುತನ್​ಪಾಳ್ಯಂ ಗ್ರಾಮದ ನಿವಾಸಿ. ಈತ ತಿರುಪುರ್​ ನಗರದ ಪೋಲುಪಟ್ಟಿ ಪಿರಿವು ಏರಿಯಾದಲ್ಲಿ ತನ್ನ ಪತ್ನಿ ಹಾಗೂ 13 ವರ್ಷದ ಮಗನೊಂದಿಗೆ ವಾಸವಿದ್ದರು.

ರಾಮ್​ಕುಮಾರ್​ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಟೇಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಒಂದು ಗಂಟೆಗೆ ಪಾನಮತ್ತ ಸ್ಥಿತಿಯಲ್ಲಿ ಮನೆಗೆ ಬಂದ ರಾಮ್​ಕುಮಾರ್​, ತನ್ನ ಕೊಣೆಯ ಬಾಗಿಲನ್ನು ಒಳಗಿಂದ ಲಾಕ್​ ಮಾಡಿಕೊಂಡಿದ್ದ. ಬಳಿಕ ಫೇಸ್​ಬುಕ್​ಗೆ ಲಾಗಿನ್​ ಆಗಿ ಲೈವ್​ ಸ್ಟ್ರೀಮ್​ ಆಯ್ಕೆ ಮಾಡಿ ಸೂಸೈಡ್ ಮಾಡಿಕೊಳ್ಳಲು ಮುಂದಾದ.

ಸೂಸೈಡ್​ ವಿಡಿಯೋ ನೋಡಿದ ಜನರು ತಕ್ಷಣ ತಿರುಪುರ್​ ನಗರ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ. ಇನ್ನೊಂದೆಡೆ ಪತಿ ಸೀಲಿಂಗ್​ ಫ್ಯಾನ್​ಗೆ ನೇಣು ಹಾಕಿಕೊಳ್ಳುವುದನ್ನು ನೋಡಿದ ಪತ್ನಿ ತಕ್ಷಣ ಮನೆಯ ಒಡತಿಯನ್ನು ಸಹಾಯಕ್ಕಾಗಿ ಕರೆದಿದ್ದಾಳೆ. ಇಬ್ಬರು ಸೇರಿ ರಾಮ್​ಕುಮಾರ್​ ಇದ್ದ ಕೋಣೆಯ ಬಾಗಿಲನ್ನು ಮುರಿದಿದ್ದಾರೆ. ತಕ್ಷಣ ನೆರೆಯವರ ಸಹಾಯದಿಂದ ತಿರುಪುರ್​ ಮೆಡಿಕಲ್​ ಕಾಲೇಜು ಮತ್ತು ಹಾಸ್ಪಿಟಲ್​ಗೆ ದಾಖಲಿಸಿದ್ದರು. ಆದರೆ, ಮಾರ್ಗ ಮಧ್ಯೆದಲ್ಲೇ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದರು.

ಇನ್ನು ರಾಮ್​ಕುಮಾರ್​ ಕೋಣೆಯಲ್ಲಿ ಸೂಸೈಡ್​ ನೋಟ್​ ಪತ್ತೆಯಾಗಿದ್ದು, ನನ್ನ ಸಾವಿಗೆ ಯಾರೂ ಜವಬ್ದಾರರಲ್ಲ ಮತ್ತು ಈ ಜಗತ್ತಿನಲ್ಲಿ ಜೀವಿಸುವ ಆಸಕ್ತಿಯನ್ನು ಕಳೆದುಕೊಂಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ.

ಪತಿಯ ಬಗ್ಗೆ ಮಾತನಾಡಿದ ಪತ್ನಿ, ಏಳು ವರ್ಷದ ಹಿಂದೆಯೇ ಒಮ್ಮೆ ಸೂಸೈಡ್​ಗೆ ಪ್ರಯತ್ನಿಸಿದ್ದರು. ಆಗ ಮನೆಯವರೇ ರಕ್ಷಿಸಿದ್ದರು ಎಂದಿದ್ದಾರೆ. ಸದ್ಯ ಅನುಪ್ಪರಪಾಳ್ಯಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ.

Comments are closed.