ಕರ್ನಾಟಕ

ತನಗೆ ಕೊರೋನಾ ಪಾಸಿಟಿವ್​​​ ಸುದ್ದಿಗೆ ಸ್ಥಳದಲ್ಲೇ ವ್ಯಕ್ತಿ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ನೆಗೆಟಿವ್ ವರದಿ

Pinterest LinkedIn Tumblr


ಕಲಬುರ್ಗಿ(ಜು.23): ಕೊರೋನಾ ಹಾಟ್ ಸ್ಪಾಟ್ ಎನಿಸಿಕೊಂಡಿರೋ ಕಲಬುರ್ಗಿಯಲ್ಲಿ ಕೊರೋನಾ ಸೋಂಕಿಗಿಂತ ಇಲ್ಲಿನ ಆಸ್ಪತ್ರೆಗಳ ಕಾರ್ಯವೈಖರಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲಿಯೂ ಥ್ರೋಟ್ ಸ್ಯಾಂಪಲ್ ವರದಿ ನೀಡೋ ಜವಾಬ್ದಾರಿ ಹೊತ್ತಿರೋ ಜಿಮ್ಸ್ ಮಾತ್ರ ಒಂದಲ್ಲ ಒಂದು ಕಾರಣಕ್ಕೆ ಚರ್ಚಗೆ ಗ್ರಾಸವಾಗುತ್ತಲೇ ಇದೆ.

ಇದೀಗ ಆರೋಗ್ಯ ಇಲಾಖೆ ಮಾಡಿದ ವಿಳಂಬದಿಂದಾಗಿ ಅಮಾಯಕನೋರ್ವ ವಿನಾಕಾರಣ ಜೀವ ತೆತ್ತ ಪ್ರಸಂಗ ನಡೆದಿದೆ. ಪಾಸಿಟಿವ್ ವರದಿ ಬಂದಿದೆ ಎಂಬ ಸುದ್ದಿ ಕೇಳಿ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ವಿಚಿತ್ರ ಪ್ರಸಂಗ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

ಹದಿನೈದು ದಿನಗಳ ನಂತರ ಕೊರೋನಾ ಟೆಸ್ಟ್ ರಿಪೋರ್ಟ್ ಬಂದಿದ್ದುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಲ್ಯಾಬ್ ವರದಿ ತಡವಾಗಿ ಬಂದಿದ್ದು, ಪಾಸಿಟಿವ್ ಬಂದಿದೆ ಎಂಬ ಮಾಹಿತಿ ತಿಳಿದು ಇದ್ದಲ್ಲಿಯೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ.

ಕಲಬುರ್ಗಿಯ ಭವಾನಿ ನಗರದಲ್ಲಿ ಘಟನೆ ನಡೆದಿದೆ. ಪಾಸಿಟಿವ್ ವರದಿ ಸುದ್ದಿ ಕೇಳಿ ಮೃತ ದುರ್ದೈವಿಯನ್ನು ಅಶೋಕ(55) ಎಂದು ಗುರುತಿಸಲಾಗಿದೆ. ಜುಲೈ 8ರಂದು ಕೊರೋನಾ ಟೆಸ್ಟ್ ಮಾಡಿಸಿಕಂಡಿದ್ದ ಅಶೋಕ. ಆದ್ರೆ ಇಂದು ಮುಂಜಾನೆ ಅಶೋಕ್​​ಗೆ ಕಾಲ್ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಕೊರೊನಾ ಪಾಸಿಟಿವ್ ಬಂದಿದೆ ಎಂದಿದ್ಧಾರೆ.

ಪಾಸಿಟಿವ್ ಬಂದಿರೋ ಸುದ್ದಿ ಕೇಳಿದ ಅಶೋಕ್, ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾನೆ. ಆಟೋ ಚಾಲಕನಾಗಿದ್ದ ಅಶೋಕ, ಅದರಿಂದಲೇ ಕುಟುಂದ ನಿರ್ವಹಣೆ ಮಾಡುತ್ತಿದ್ದ. ಅಶೋಕನ ಅಳಿಯನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಶೋಕ ಮತ್ತು ಆತನ ಕುಟುಂಬದವರು ಟೆಸ್ಟ್ ಮಾಡಿಸಿಕೊಂಡಿದ್ದರು. ಆದರೆ ವರದಿ ಹದಿನೈದು ದಿನಗಳ ನಂತರ ಬಂದಿದೆ.

ವಿಚಿತ್ರವೆಂದರೆ ಅಶೋಕನ ಶವವನ್ನು ಆಸ್ಪತ್ರೆ ಗೆ ತಂದು ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆ ಮಾಡಿದಾಗ ಆತನಿಗೆ ಕೊರೋನಾ ನೆಗಟಿವ್ ಬಂದಿದೆ. ರೋಗ ನಿರೋಧಕ ಶಕ್ತಿಯಿಂದ ಹದಿನೈದು ದಿನಗಳಲ್ಲಿ ಸೋಂಕು ಹೋಗಿರೋ ಸಾಧ್ಯತೆ ಇದೆ. ಆದರೆ ವರದಿಯ ವಿಳಂಬದಿಂದಾಗಿ ಒಂದು ಜೀವ ಬಲಿಯಾಗಿದೆ. ಆರೋಗ್ಯ ಇಲಾಖೆ ವಿರುದ್ಧ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ ವಿಳಂಬವಾಗಿ ಬಂದಿದ್ದರಿಂದ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಮೃತ ಅಶೋಕನ ಪುತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

Comments are closed.