ಕರ್ನಾಟಕ

ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾದ ಬಚ್ಚೇಗೌಡ ದಂಪತಿ

Pinterest LinkedIn Tumblr

ಬೆಂಗಳೂರು: ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಪತ್ನಿ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಸಂಬಂಧ ಹೊಸಕೋಟೆ ಶಾಸಕ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

“ನಾನು ಹಾಗೂ ನನ್ನ ಧರ್ಮಪತ್ನಿ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖ ಆಗಿದ್ದೇವೆ. ಇಂದು ಕೊರೋನಾ ಪರೀಕ್ಷೆಯ ಫಲಿತಾಂಶದಲ್ಲಿ #ನೆಗಟಿವ್ ಎಂದು ಬಂದಿದೆ.

“ನಾವು ಬೇಗ ಗುಣಮುಖರಾಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದಕ್ಕೆ ನಾವು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ.” ಶಾಸಕ ಶರತ್ ಬಚ್ಚೇಗೌಡ ಟ್ವೀಟ್ ಮಾಡಿದ್ದಾರೆ.

ಒಂದು ವಾರದ ಹಿಂದೆ ಶರತ್ ಬಚ್ಚೇಗೌಡ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು, ಆದರೆ ಈಗ ಎರಡನೇ ಬಾರಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ದಂಪತಿಗಳ ಕೊರೋನಾ ವರದಿ ನೆಗೆಟಿವ್ ಬಂದಿದೆ.

ಇಷ್ಟೇ ಅಲ್ಲದೆ ಕೋವಿಡ್ ಪೀಡಿತರನ್ನು ಅಪರಾಧಿಗಳಂತೆ ಕಾಣಬೇಡಿ, ಅವರ ಸಾಮಾಜಿಕ ನಿಂದನೆ ಮಾಡವೇಡಿ, ಇದೊಂದು ಯುದ್ಧವಾಗಿದ್ದು ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಶಾಸಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments are closed.