ರಾಷ್ಟ್ರೀಯ

ದೇಶದ ಜಿಡಿಪಿ-ಚೀನಾದೊಂದಿಗೆ ಗಡಿ ವಿವಾದ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್, ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಮತ್ತು ಚೀನಾದೊಂದಿಗೆ ಗಡಿ ವಿವಾದ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸುಳ್ಳು ಹೇಳುವುದನ್ನು ಬಿಜೆಪಿ ಕರಗತ ಮಾಡಿಕೊಂಡಿದೆ. ಕೋವಿಡ್-19 ಪರೀಕ್ಷೆಯನ್ನು ನಿರ್ಬಂಧಗೊಳಿಸಿ ಸಾವಿನ ಸಂಖ್ಯೆಯನ್ನು ತಪ್ಪಾಗಿ ವರದಿ ಮಾಡುತ್ತಿದೆ. ಜಿಡಿಪಿ ವಿಚಾರದಲ್ಲಿ ಹೊಸ ಲೆಕ್ಕಾಚಾರ ವಿಧಾನಗಳನ್ನು ಅನುಸರಿಸುತ್ತಿದೆ. ಇನ್ನು ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾ ಆಕ್ರಮಣಶೀಲತೆ ತೋರಿಸುತ್ತಿದೆ, ಭ್ರಮೆ ಶೀಘ್ರವೇ ಮುರಿಯಲಿದ್ದು ಇದಕ್ಕೆ ಭಾರತ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಪತ್ರಿಕೆಯೊಂದರ ಲೇಖನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಜೊತೆಗೆ ಲಗತ್ತಿಸಿದ್ದಾರೆ.

Comments are closed.