ನವದೆಹಲಿ: ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹಲವು ರಸ್ತೆಗಳು ಜಲಾವೃತವಾಗಿದ್ದು ವ್ಯಕ್ತಿಯೊಬ್ಬರ ಮೃತದೇಹ ಮಿಂಟೊ ಸೇತುವೆಯ ಕೆಳಗೆ ಪ್ರವಾಹದಲ್ಲಿ ಸಿಲುಕಿಹಾಕಿಕೊಂಡಿದ್ದು ಕಾಣಿಸಿದೆ. ಪಿಕ್ ಅಪ್ ಟ್ರಕ್ ಡ್ರೈವರ್ ಕುಂದನ್ ಎಂಬುವವರ ಮೃತದೇಹ ಅದಾಗಿದ್ದು ದೆಹಲಿ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿರುವ ಟ್ರ್ಯಾಕ್ ಮ್ಯಾನ್ ಅವರಿಗೆ ಕಾಣಿಸಿದೆ.
ಟ್ರ್ಯಾಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತದೇಹ ಬಸ್ಸಿನ ಮುಂಭಾಗ ತೇಲುತ್ತಿರುವುದು ಕಾಣಸಿಕ್ಕಿತು. ಮೃತದೇಹವನ್ನು ಪ್ರವಾಹದಿಂದ ಹೊರತೆಗೆದೆ ಎಂದು ರಾಮ್ನಿವಾಸ್ ಮೀನಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ದೆಹಲಿ ಸುತ್ತಮುತ್ತ ಭಾರೀ ಮಳೆ ಮತ್ತು ಮೋಡ ಮುಸುಕಿದ್ದು ತಾಪಮಾನ ಕುಸಿದಿದೆ. ಇಂದು ಬೆಳಗ್ಗೆ 5.30ರವೆಗೆ ದೆಹಲಿಯಲ್ಲಿ 4.9 ಮಿಲಿ ಮೀಟರ್ ಮಳೆಯಾಗಿದೆ. ಪಾಲಮ್ ಹವಾಮಾನ ಕೇಂದ್ರದಲ್ಲಿ 3.8 ಮಿಲಿ ಮೀಟರ್ ಮಳೆ ದಾಖಲಾಗಿದೆ, ವಾಯುವ್ಯ ಭಾರತದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕೂಡ ಭಾರೀ ಮಳೆಯಾಗುತ್ತಿದೆ.
Comments are closed.