ಕರ್ನಾಟಕ

ರಾಜ್ಯದಲ್ಲಿ ಇಂದು (ಶನಿವಾರ) 4,537 ಪ್ರಕರಣಗಳು ದಾಖಲು: 93 ಸಾವು

Pinterest LinkedIn Tumblr


ಬೆಂಗಳೂರು; ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 4,537 ದಾಖಲೆ ಪ್ರಮಾಣದ ಪ್ರಕರಣಗಳು ವರದಿಯಾಗಿವೆ. ಮಾರಕ ಸೋಂಕಿಗೆ ಒಂದೇ ದಿನದಲ್ಲಿ 93 ಮಂದಿ ಬಲಿಯಾಗಿದ್ದಾರೆ.

ಸಚಿವ ಕೆ.ಸುಧಾಕರ್ ಈ ದಿನದ ಅಂಕಿ-ಸಂಖ್ಯೆಗಳ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿ, ರಾಜಧಾನಿ ಬೆಂಗಳೂರಿನಲ್ಲಿ 2125 ಪ್ರಕರಣಗಳು ದಾಖಲಾಗಿದ್ದು, 49 ಮಂದಿ ಮೃತಪಟ್ಟಿದ್ದಾರೆ. 1018 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಧಾರವಾಡದಲ್ಲಿ 186 ಪ್ರಕರಣಗಳು, ಬಳ್ಳಾರಿಯಲ್ಲಿ 155 ಪ್ರಕರಣಗಳು, ಬೆಳಗಾಂ- 137 ಕೇಸ್, ದಕ್ಷಿಣ ಕನ್ನಡ 509 ಪ್ರಕರಣಗಳು, ವಿಜಯಪುರ 175 ಕೇಸ್ ಹಾಗೂ ಯಾದಗಿರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 36,631 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 22,498 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ ಶೇ.2.08ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ.2.13ರಷ್ಟಿದೆ.

ನೆನ್ನೆ (ಶುಕ್ರವಾರ) 3,693 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರೊಂದರಲ್ಲೇ 2,208 ಕೊರೋನಾ ಕೇಸ್​ಗಳು ಪತ್ತೆಯಾಗಿದ್ದವು. ಬೆಂಗಳೂರಿನಲ್ಲಿ ಲಾಕ್​ಡೌನ್ ಘೋಷಿಸಿದ ಬಳಿಕ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Comments are closed.