ಫೇಸ್ಬುಕ್ ತನ್ನ ಮೆಸೆಂಜರ್ ಆ್ಯಪ್ನಲ್ಲಿ ಹೊಸ ಸ್ಕ್ರೀನ್ ಶೇರಿಂಗ್ ಫೀಚರ್ ಅನ್ನು ಪರಿಚಯಿಸಿದೆ. ಆ ಮೂಲಕ ಮೆಸೆಂಜರ್ ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ.
ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸ್ಕ್ರೀನ್ ಶೇರಿಂಗ್ ಫೀಚರ್ ನೀಡಿದೆ. ಆದರೆ ಮೆಸೆಂಜರ್ ವೆಬ್ ಬಳಕೆದಾರರಿಗೆ ಈ ಫೀಚರ್ ಅನ್ನು ನಿರ್ಬಂಧಿಸಲಾಗಿದೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರು ಈ ಫೀಚರ್ ಮೂಲಕ ಸ್ಕ್ರೀನ್ ಶೇರಿಂಗ್ ಫೀಚರ್ ಅನ್ನು ಬಳಸಬಹುದಾಗಿದೆ.
ಫೇಸ್ಬುಕ್ ಮೆಸೆಂಜರ್ ಆ್ಯಪ್ ಬಳಕೆದಾರರು ವಿಡಿಯೋ ಕರೆಯ ಸಮಯದಲ್ಲಿ ಸ್ಕ್ರೀನ್ ಶೇರ್ ಮಾಡಬಹುದಾದ ಆಯ್ಕೆ ಇದಾಗಿದೆ. ಎರಡು ಜನರು ಅಥವಾ ಎಂಟು ಜನರು ಈ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಒಟ್ಟಿಗೆ ಬಳಸಬಹುದಾಗಿದೆ. ಅದರ ಜೊತೆಗೆ ಫೋಟೋ ಗ್ಯಾಲರಿ ಬ್ರೌಸಿಂಗ್, ಆನ್ಲೈನ್ ಶಾಂಪಿಂಗ್, ಸೋಷಿಯಲ್ ಮೀಡಿಯಾ ಬಳಕೆ ಮುಂತಾದವುಗಳನ್ನು ಫೋನ್ ಪರದೆಯ ಮೂಲಕ ಹಂಚಿಕೊಳ್ಳಬಹುದಾಗಿದೆ.
ಸ್ಕ್ರೀನ್ ಶೇರಿಂಗ್
ಫೇಸ್ಬುಕ್ ಮೆಸೆಂಜರ್ ರೂಮ್ಸ್ ಬಳಕೆದಾರರು ಎಕಕಾಲದಲ್ಲಿ 16 ಜನರೊಂದಿಗೆ ಸ್ಕ್ರೀನ್ ಶೇರ್ ಮಾಡುವ ಆಯ್ಕೆಯನ್ನು ಒದಗಿಸಿದೆ. ಇತ್ತೀಚೆಗೆ ಜೂಮ್ ಮತ್ತ ಸ್ಕೈಪ್ನಂತಹ ವಿಡಿಯೋ ಕಾಲಿಂಗ್ ಸೇವೆಯಲ್ಲಿ ಹಲವಾರು ಫೀಚರ್ಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಮೆಸೆಂಜರ್ ರೂಮ್ಸ್ ಕೂಡ ಸ್ಕ್ರೀನ್ ಶೇರಿಂಗ್ ಫೀಚರ್ ನೀಡಿದೆ. ಫೇಸ್ಬುಕ್ ಖಾತೆ ಹೊಂದಿರದ ಬಳಕೆದಾರರು ಕೂಡ ಈ ಮೆಸೆಂಜರ್ ಆ್ಯಪ್ನಲ್ಲಿ ಈ ಫೀಚರ್ ಬಳಸಬಹುದಾಗಿದೆ.
ಫೇಸ್ಬುಕ್ ತನ್ನ ಸ್ಕ್ರೀನ್ ಶೇರಿಂಗ್ ಫೀಚರ್ ಅನ್ನು 16 ರಿಂದ 50ಕ್ಕೆ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ವಿಡಿಯೋ ಕರೆಯನ್ನು ನಿಯಂತ್ರಿಸುವ ಬಳಕೆದಾರರಿಗೆ ಈ ಸೇವೆಯನ್ನು ಹಂಚಿಕೊಳ್ಳುವ ಆಯ್ಕೆಯನ್ನು ನೀಡಲಿದೆ. ಆ ಮೂಲಕ ಎಲ್ಲಾ ಬಳಕೆದಾರರು ಸ್ಕ್ರೀನ್ ಶೇರ್ ಮಾಡಬಹುದಾಗಿದೆ.
Comments are closed.