ಕರ್ನಾಟಕ

ರಾಜ್ಯದಲ್ಲಿ ಭಾನುವಾರ ಲಾಕ್​ಡೌನ್​ ಜೊತೆ ಇನ್ನೊಂದು ತಿಂಗಳು ಶನಿವಾರವೂ ಲಾಕ್​ಡೌನ್​?; ಯಡಿಯೂರಪ್ಪ ಚಿಂತನೆ

Pinterest LinkedIn Tumblr


ಬೆಂಗಳೂರು (ಜು.8): ಕೊರೋನಾ ವೈರಸ್​ ರಾಜ್ಯದಲ್ಲಿ ಮಿತಿ ಮೀರಿ ಹರಡುತ್ತಿದೆ. ಅನೇಕ ಕಡೆಗಳಲ್ಲಿ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಲಾಗಿದೆ. ಇನ್ನು, ಒಂದು ದಿನವಾದರೂ ಜನರ ಓಡಾಟ ತಡೆಯುವ ಉದ್ದೇಶದಿಂದ ರಾಜ್ಯಸರ್ಕಾರ ಭಾನುವಾರ ಲಾಕ್​ಡೌನ್​ ನಿಯಮ ಜಾರಿಗೆ ತಂದಿದೆ. ಇದು ಯಶಸ್ಸು ಕಂಡ ಬೆನ್ನಲ್ಲೇ ಈಗ ಶನಿವಾರ ಕೂಡ ಲಾಕ್​ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕೊರೋನಾ ಹೆಚ್ಚುತ್ತಿದ್ದಂತೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ನಿಯಮ ಜಾರಿಗೆ ತರಲಾಗಿದೆ. ಅಲ್ಲದೆ, ಭಾನುವಾರ ಸಂಪೂರ್ಣ ಲಾಕ್​ಡೌನ್​ ಜಾರಿಯಲ್ಲಿರುತ್ತದೆ. ಕಳೆದ ಭಾನುವಾರದ ಲಾಕ್​ಡೌನ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, ಶನಿವಾರವೂ ಲಾಕ್​​ಡೌನ್​ ಘೋಷಣೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಯನ್ನು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪರ ತಮ್ಮ ಸರ್ಕಾರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರ ಮುಂದಿಟ್ಟಿದ್ದಾರೆ.

ಸಭೆಯಲ್ಲಿ ಡಾ.ಸಿ.ಎನ್.ಅಶ್ವತ್‌ನಾರಾಯಣ್‌, ಡಾ.ಕೆ.ಸುಧಾಕರ್‌ ಜತೆ ಲಾಕ್‌ಡೌನ್ ಜಾರಿ ಬಗ್ಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. “ಸದ್ಯ ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್ ಆದೇಶ ಜಾರಿ ಮಾಡಿದ್ದೇವೆ. ರಾತ್ರಿ 8 ಘಂಟೆಯಿಂದ ಬೆಳಿಗ್ಗೆ ‌5 ಘಂಟೆಯವರೆಗೂ ಕರ್ಫ್ಯೂ ಜಾರಿಗೊಳಿಸಿದ್ದೇವೆ. ಇದಿಷ್ಟೇ ಸಾಕಾಗುವುದಿಲ್ಲ ಎನಿಸುತ್ತಿದೆ. ಹೀಗಾಗಿ, ಮುಂದಿನ ಮೂರು ವಾರಗಳ ಕಾಲ ಶನಿವಾರವು ಲಾಕ್‌ಡೌನ್ ವಿಸ್ತರಣೆ ಮಾಡಿದರೆ ಹೇಗೆ? ಎಂದು ಸಚಿವರನ್ನು ಸಿಎಂ ಪ್ರಶ್ನಿಸಿದ್ದಾರೆ.

ಈ ಕುರಿಂತೆ ಸಂಜೆ ಒಳಗೆ ಅನಿಸಿಕೆ ತಿಳಿಸುವಂತೆ ಅಶ್ವತ್‌ನಾರಾಯಣ್‌, ಹಾಗೂ ಸುಧಾಕರ್‌ ಬಳಿ ಕೊರಿದ್ದಾರೆ. ಸಚಿವರ ಅಭಿಪ್ರಾಯದ ಮೇಲೆ ಶನಿವಾರದ ಲಾಕ್​ಡೌನ್​ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

Comments are closed.