ಅಂತರಾಷ್ಟ್ರೀಯ

ಕೋವಿಡ್ -19 ಮೂಲದ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಗೆ ಚೀನಾ ಸಮ್ಮತಿ

Pinterest LinkedIn Tumblr


ನ್ಯೂಯಾರ್ಕ್: ಕೋವಿಡ್ ೧೯ ವೈರಾಣುವಿನ ಮೂಲ ಶೋಧನೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಂಡವನ್ನು ಚೀನಾಗೆ ಕರೆಸಲಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.

ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಕಳೆದ ವಾರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಂತೆ ವೈರಸ್‌ನ ಉಗಮದ ಬಗ್ಗೆ “ಸಮಗ್ರ ತನಿಖೆ” ಮಾಡಬೇಕಾಗಿದೆ. ಈ ಭೇಟಿಗೆ ಡಬ್ಲ್ಯುಎಚ್‌ಒ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿತ್ತು. ಇದಿಗ ಮಾತುಕತೆ ಫಲ ನೀಡಿದ್ದು ಚೀನಾ ಸರ್ಕಾರ ಡಬ್ಲ್ಯುಎಚ್‌ಒ ತಂಡವನ್ನು ಚೀನಾಗೆ ಆಗಮಿಸಲು ಅನುಮತಿಸಿದೆ.

“ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ತಂಡ ಮುಂದಿನ ವಾರ ಚೀನಾಕ್ಕೆ ಹೋಗಲಿದೆ” ಎಂದು ಸ್ವಾಮಿನಾಥನ್ ಎಎನ್‌ಐಗೆ ತಿಳಿಸಿದ್ದಾರೆ.

“ಈಗ ಬೇಕಾಗಿರುವುದು ಅದು ಎಲ್ಲಿ ಮತ್ತು ಹೇಗೆ ಪ್ರಾಣಿಗಳು, ಮನುಷ್ಯರ ಸಂಪರ್ಕಕ್ಕೆ ಬಂದಿದೆ ಎನ್ನುವುದಾಗಿದೆ. ಇದಕ್ಕಾಗಿ ಸಂಪೂರ್ಣ ತನಿಖೆ ಇನ್ನೂ ಆಗಬೇಕಿದೆ” ಅವರು ಹೇಳಿದ್ದಾರೆ.

Comments are closed.