ಕರ್ನಾಟಕ

ರಾಜ್ಯದಲ್ಲಿ ಇಂದು(ಬುಧವಾರ) 2062 ಕೊರೋನಾ ಪ್ರಕರಣಗಳು ಪತ್ತೆ: 54 ಮಂದಿ ಸಾವು

Pinterest LinkedIn Tumblr


ಬೆಂಗಳೂರು; ದಿನದಿಂದ ದಿನಕ್ಕೆ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕರ್ನಾಟಕದಲ್ಲಿ 2,062 ಹೊಸ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರಿನಲ್ಲಿ 1,148 ಜನರಿಗೆ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಇಂದು ಕೊರೋನಾದಿಂದ 54 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಕೊರೋನಾದಿಂದ ಸಾವಿನ ಪ್ರಮಾಣ ರಾಜ್ಯದಲ್ಲಿ 1.3ರಷ್ಟಿದ್ದು, ಬೆಂಗಳೂರಿನಲ್ಲಿ 1.34ರಷ್ಟಿದೆ. ರಾಜ್ಯಾದ್ಯಂತ ಇದುವರೆಗೂ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 28,877 ತಲುಪಿದೆ. ಒಟ್ಟಾರೆ ಕರ್ನಾಟಕದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.

ನೆನ್ನೆ ಕರ್ನಾಟಕದಲ್ಲಿ 15 ಮಂದಿ ಸಾವನ್ನಪ್ಪಿದ್ದರು. ಒಟ್ಟು 1,498 ಪ್ರಕರಣಗಳು ದಾಖಲಾಗಿದ್ದವು.

Comments are closed.