ಕರ್ನಾಟಕ

ಗುಂಡ್ಲುಪೇಟೆಯ ಒಂದೇ ಮನೆಯ 5 ಮಂದಿಗೆ ಕೊರೋನಾ ಸೋಂಕು

Pinterest LinkedIn Tumblr


ಚಾಮರಾಜನಗರ(ಜುಲೈ.07): ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಆರು ಕೊರೋನಾ ದೃಢಪಟ್ಟಿದೆ. ಇದರಲ್ಲಿ ಗುಂಡ್ಲುಪೇಟೆಯ ಒಂದೇ ಕುಟುಂಬದ ಐವರಿಗೆ ಸೋಂಕು ತಗುಲಿದ್ದು ಆತಂಕ ಮೂಡಿಸಿದೆ. ಇಂದಿನ ಆರು ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 120 ಕ್ಕೇರಿದೆ.

ಜಿಲ್ಲಾಡಳಿತದಿಂದ ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಐವರಿಗೆ ಹಾಗೂ ಕೊಳ್ಳೇಗಾಲದ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ವರದಿಯಾಗಿದೆ. ಇದುವರೆಗೆ 24 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಉಳಿದ 96 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಪೈಕಿ ಇಬ್ಬರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೋನಾ ದೃಢಪಟ್ಟ ಸೋಂಕಿತರನ್ನು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೋನಾ ಹಾಟ್ ಸ್ಪಾಟ್ ಆಗಿರುವ ಗುಂಡ್ಲುಪೇಟೆಯಲ್ಲಿಂದು ಒಂದೇ ಕುಟುಂಬದ ಐವರಿಗೆ ಸೋಂಕು ತಗುಲಿದೆ. ಜೂನ್ 3 ರಂದು ಗುಂಡ್ಲುಪೇಟೆಯ ಬಟ್ಟೆ ಅಂಗಡಿ ಸಹಾಯಕಿಯೊಬ್ಬರಿಗೆ (ಪೆ. 18544) ಕೊರೊನಾ ದೃಢಪಟ್ಟಿತ್ತು.

ಇದೀಗ ಇವರ ಕುಟುಂಬದ 14 ವರ್ಷದ ಬಾಲಕ, 12 ವರ್ಷದ ಬಾಲಕಿ, 20 ವರ್ಷದ ಯುವತಿ, 25 ವರ್ಷದ ಯುವಕ, 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಇದರೊಂದಿಗೆ ಗುಂಡ್ಲುಪೇಟೆ ತಾಲೂಕು ಒಂದರಲ್ಲಿಯೇ ಕೊರೊನಾ ಪ್ರಕಣಗಳ ಸಂಖ್ಯೆ 67ಕ್ಕೇರಿದೆ.

ಇದುವರೆಗೆ 8945 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 8821 ಮಂದಿಯ ವರದಿ ನೆಗೆಟಿವ್ ಬಂದಿದೆ. ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದ 1017 ಮಂದಿಯ ಮೇಲೆ ನಿಗಾವಣೆ ಇಡಲಾಗಿದೆ

Comments are closed.