ಕೊರೋನಾ ವೈರಸ್ ರೋಗಿಗಳನ್ನು ಕಂಡರೆ ಎಲ್ಲರೂ ಭಯ ಬೀಳುತ್ತಾರೆ. ಅಷ್ಟೇ ಏಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಕೆಲ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಅಧ್ಯಯನದಿಂದ ಅಚ್ಚರಿ ವಿಚಾರ ಒಂದು ಹೊರ ಬಿದ್ದಿದೆ. ಕೋರೋನಾ ಸೋಂಕಿತರ ಜೊತೆಗೆ ಬಾಳುವವರಲ್ಲಿ ಗೊತ್ತಿಲ್ಲದೆ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ ಎಂದು ಅಧ್ಯಯನಕಾರರು ಹೇಳಿರುವುದಾಗಿ Daily Mail ವರದಿ ಮಾಡಿದೆ.
ಕೊರೋನಾ ವೈರಸ್ ವ್ಯಕ್ತಿ ಜೊತೆ ಇರುವ ನಾಲ್ಕರಲ್ಲಿ ಒಬ್ಬರಿಗೆ ಈ ರೀತಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ ಎಂಬ ವಿಚಾರ ಅಧ್ಯಯನದಿಂದ ಹೊರಬಿದ್ದಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ ಎಂದು ಅಧ್ಯನ ತಂಡ ತಿಳಿಸಿದೆ.
ಕೊರೋನಾ ರೋಗಿಗಳ ಜೊತೆ ಇರುವ ಅನೇಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಎಂಟರಲ್ಲಿ ಆರು ಜನರಿಗೆ ಕೊರೋನಾ ವರದಿ ನೆಗೆಟಿವ್ ಬಂದಿದೆ. ಆದರೆ ಇವರಲ್ಲಿ ಚಿಕ್ಕ ಪ್ರಮಾಣದಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದವು ಎಂದು ಅಧ್ಯಯನ ಹೇಳಿದೆ.
ಒಂದು ಲೆಕ್ಕಾಚಾರದ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ.10 ಜನರಲ್ಲಿ ಈಗಾಗಲೇ ಕೊರೋನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಬೆಳೆದಿದೆಯಂತೆ. ಇನ್ನು, ಟಿ ಸೆಲ್ಗಳು ನಮ್ಮ ದೇಹದ ದೊಡ್ಡ ಅಸ್ತ್ರವಾಗಿದ್ದು, ಇವು ರೋಗ ನಿರೋಧಕ ವ್ಯವಸ್ಥೆಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ಇವು ಹೋರಾಟ ಆರಂಭಿಸುತ್ತವೆ.
Comments are closed.