ಮನೋರಂಜನೆ

ನಿತ್ಯಾ ಮೆನನ್‌ಗೆ ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿದ ವಿವಾಹಿತ ನಟ!

Pinterest LinkedIn Tumblr


ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ದುಲ್ಖರ್‌ ಸಲ್ಮಾನ್‌ ಮತ್ತು ನಿತ್ಯಾ ಮೆನನ್‌ ಹೆಸರು ಕೂಡ ಕೇಳಿಬರುತ್ತದೆ. ಇವರಿಬ್ಬರ ಆನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಬೆಂಗಳೂರು ಡೇಸ್‌’, ‘ಓಕೆ ಕಣ್ಮಣಿ’ ಮತ್ತು ‘100 ಡೇಸ್‌ ಆಫ್‌ ಲವ್‌’ ಸಿನಿಮಾಗಳಲ್ಲಿ ಅವರು ಜೊತೆಯಾಗಿ ನಟಿಸಿದ್ದಾರೆ. ತಮ್ಮಿಬ್ಬರ ನಡುವಿನ ಒಡನಾಟ ಯಾವ ರೀತಿ ಇದೆ ಎಂಬುದರ ಬಗ್ಗೆ ನಿತ್ಯಾ ಹಲವು ಬಾರಿ ಹೇಳಿಕೊಂಡಿದ್ದುಂಟು.

ಪ್ರಸ್ತುತ ನಿತ್ಯಾಗೆ 32ರ ಪ್ರಾಯ. ಈಗಲೂ ಅವರ ಕೈಯಲ್ಲಿ ಹಲವು ಆಫರ್‌ಗಳಿವೆ. ಇತ್ತೀಚೆಗೆ ವಿಭಿನ್ನ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ. ಹಾಗಾದರೆ ನಿತ್ಯಾ ಮದುವೆ ಆಗೋದು ಯಾವಾಗ? ಈ ಪ್ರಶ್ನೆ ಅಭಿಮಾನಿಗಳ ವಲಯದಿಂದ ಸದಾ ಕೇಳಿಬರುತ್ತಲೇ ಇರುತ್ತದೆ. ಈ ಬಗ್ಗೆ ಇತ್ತೀಚೆಗೆ ನಿತ್ಯಾ ಮಾತನಾಡಿದ್ದಾರೆ. ತಮ್ಮ ಮದುವೆ ಬಗ್ಗೆ ದುಲ್ಖರ್‌ ಸಲ್ಮಾನ್‌ ಏನು ಹೇಳುತ್ತಾರೆ ಎಂಬುದನ್ನೂ ಅವರು ಬಾಯಿ ಬಿಟ್ಟಿದ್ದಾರೆ.

ತೆರೆಮೇಲೆ ಮಾತ್ರವಲ್ಲದೆ, ರಿಯಲ್‌ ಲೈಫ್‌ನಲ್ಲಿಯೂ ನಿತ್ಯಾ ಮತ್ತು ದುಲ್ಖರ್‌ ನಡುವೆ ಉತ್ತಮ ಬಾಂಡಿಂಗ್‌ ಹೊಂದಿರುವುದರಿಂದ ಮದುವೆ ಬಗ್ಗೆ ನಿತ್ಯಾಗೆ ದುಲ್ಖರ್‌ ಆಗಾಗ ಸಲಹೆ ನೀಡುತ್ತಾರಂತೆ. ‘ದುಲ್ಖರ್‌ ಪಕ್ಕಾ ಫ್ಯಾಮಿಲಿ ಮ್ಯಾನ್‌. ಮದುವೆ ಎಂಬುದು ಎಷ್ಟು ಮಹತ್ವದ್ದು ಎಂದು ಆಗಾಗ ಅವರು ನನಗೆ ಹೇಳುತ್ತಲೇ ಇರುತ್ತಾರೆ. ನಾನು ಕೂಡ ಮದುವೆ ಆಗಲಿ ಎಂದು ಅವರು ಮನವೊಲಿಸಲು ಪ್ರಯತ್ನಿಸುತ್ತಾರೆ’ ಎಂದಿದ್ದಾರೆ ನಿತ್ಯಾ.

ಮಲಯಾಳಂ ಚಿತ್ರರಂಗದಲ್ಲಿ ಸಖತ್‌ ಬ್ಯುಸಿ ಆಗಿರುವ ನಟ ದುಲ್ಖರ್‌ ಸಲ್ಮಾನ್‌ ಅವರು ತಮಿಳು, ತೆಲುಗು ಮತ್ತು ಹಿಂದಿ ಸಿನಿಪ್ರಿಯರಿಗೂ ಪರಿಚಿತ. ಸೋನಮ್‌ ಕಪೂರ್‌ ಜೊತೆ ಅವರು ‘ಜೋಯಾ ಫ್ಯಾಕ್ಟರ್‌’ ಸಿನಿಮಾದಲ್ಲಿ ನಟಿಸಿದ್ದರು. ಫ್ಯಾಮಿಲಿಗಾಗಿ ದುಲ್ಖರ್‌ ಸಮಯ ನೀಡಿತ್ತಾರೆ. 2011ರಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರಿಗೆ ಮುದ್ದಾದ ಮಗಳು ಇದ್ದಾಳೆ.

Comments are closed.