ಕರ್ನಾಟಕ

ಪ್ರತಿ ಭಾನುವಾರ ಆಗಸ್ಟ್ 2ರವರೆಗೆ ಲಾಕ್‍ಡೌನ್

Pinterest LinkedIn Tumblr


ಬೆಂಗಳೂರು: ಜುಲೈ 5 ರಿಂದ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲಾಗುವುದು ಎಂದು ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಇನ್ನು ಸರ್ಕಾರಿ ನೌಕರರಿಗೆ 2020 ಜುಲೈ 10 ರಿಂದ ಆಗಸ್ಟ್ 8ರವರಗೆ ಪ್ರತಿ ಶನಿವಾರ ರಜೆ ಸಿಗಲಿದೆ.

ರಾಜ್ಯದ್ಯಾಂತ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕಫ್ರ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ನಿಷೇಧಿಸಿದೆ.

ನೈಟ್ ಕರ್ಫ್ಯೂನಲ್ಲಿ ಏನಿರುತ್ತೆ?
> ಆಸ್ಪತ್ರೆ ಸೇವೆಗಳು, ಮೆಡಿಕಲ್ ಸ್ಟೋರ್ಸ್ ಇರುತ್ತವೆ
> ಅಗತ್ಯ ವಸ್ತು ಸೇವೆಗಳಿಗೆ ನಿರ್ಬಂಧ ಇರಲ್ಲ
> ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಇರ್ತವೆ
> ಅಗತ್ಯ ವಸ್ತು/ ಸೇವೆಗಳ ವಾಹನಗಳ ಸಂಚಾರ ಇರುತ್ತೆ
> ಕೊರೋನಾ ವಾರಿಯರ್ಸ್ ವಾಹನ ಸಂಚಾರ, ಓಡಾಟಕ್ಕೆ ಅವಕಾಶ ಇರುತ್ತೆ

ನೈಟ್ ಕರ್ಫ್ಯೂನಲ್ಲಿ ಏನಿರಲ್ಲ?
> ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಬಂದ್
> ದೇವಸ್ಥಾನ, ಮಸೀದಿ, ಚರ್ಚ್ ಬಂದ್
> ಮದ್ಯದ ಅಂಗಡಿಗಳು, ಬಾರ್ ಗಳು ಬಂದ್
> ಹೋಟೆಲ್ ಡೈನಿಂಗ್, ರೆಸ್ಟೋರೆಂಟ್ ಬಂದ್
> ಖಾಸಗಿ ವಾಹನ ಸಂಚಾರ, ಓಡಾಟ ಬಂದ್

Comments are closed.