ಕರ್ನಾಟಕ

ಕೊರೋನಾ​ಗೆ ಬೆಂಗಳೂರಿನಲ್ಲಿ ಮತ್ತೊರ್ವ ಎಎಸ್ಐ ಬಲಿ

Pinterest LinkedIn Tumblr


ಬೆಂಗಳೂರು (ಜೂ.28): ಮಾಹಾಮಾರಿ ಕೊರೋನಾ ಅನೇಕರನ್ನು ಬಲಿ ಪಡೆದುಕೊಳ್ಳುತ್ತಿದೆ. ಬೆಂಗಳೂರಲ್ಲಂತೂ ಪೊಲೀಸರಿಗೆ ದುಸ್ವಪ್ನವಾಗಿ ಕಾಡುತ್ತಿದೆ ಕೊರೋನಾ. ಈಗ ನಗರದಲ್ಲಿ ಮತ್ತೊರ್ವ ಎಎಸ್ಐ ಸಾವನ್ನಪ್ಪಿದ್ದಾರೆ.

ವೈಟ್​​ಫೀಲ್ಡ್ ಪೊಲೀಸ್ ಠಾಣೆಯ 57 ವರ್ಷ ವಯಸ್ಸಿನ ಎಎಸ್ಐ ಮೃತ ದುರ್ದೈವಿ. ಎಎಸ್ಐಗೆ ವಯಸ್ಸಾಗಿದ್ದರಿಂದ ಮನೆಯಲ್ಲೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿತ್ತು. ಇಲಾಖೆ ಸೂಚನೆಯಂತೆ ಅವರು ಮನೆಯಲ್ಲೇ ಇದ್ದರು. ಇದೇ 26 ರಂದು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬದವರು ಅವರನ್ನ ಅಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು ಮಾರ್ಗ ಮಧ್ಯೆ ಎಎಸ್ಐ ಮೃತಪಟ್ಟಿದ್ದಾರೆ. ಮೃತ ಎಎಸ್ಐ ಸ್ವಾಬ್ ಟೆಸ್ಟ್ ಮಾಡಿದ ವೇಳೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

50 ವರ್ಷ ಮೇಲ್ಪಟ್ಟವರಿಗೆ ವರ್ಕ್​ ಫ್ರಮ್​ ಹೋಂ:
ಇದೇ ವೇಳೆ ನಗರದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 50 ವರ್ಷ ಮೇಲ್ಪಟ್ಟ ಪೊಲೀಸರು ಇನ್ಮುಂದೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿನ್ನೆ ಹೊಸ ಆದೇಶ ಹೊರಡಿಸಿದ್ದಾರೆ.

ಮಾಹಾಮಾರಿ ಕೊರೊನಾ ಸೋಂಕು ಬೆಂಗಳೂರು ಪೊಲೀಸರಲ್ಲಿ ವೇಗವಾಗಿ ಹಬ್ಬುತ್ತಿದ್ದು ಈಗಾಗಲೇ 120ಕ್ಕು ಹೆಚ್ಚು ಪೊಲೀಸರಿಗೆ ಪಾಸಿಟಿವ್ ದೃಡಪಟ್ಟಿದೆ. ಪೊಲೀಸರಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ಸಾಕಷ್ಟು ಪೊಲೀಸರು ಆತಂಕಕ್ಕೊಳಗಾಗಿದ್ದು ಭಯ ಭೀತರಾಗಿದ್ದಾರೆ. ಅಲ್ಲದೆ, ನಿವೃತ್ತಿ ಅಂಚಿನಲ್ಲಿದ್ದ ಮೂವರು ಪೊಲೀಸರ ಮಾಹಾಮಾರಿಗೆ ಬಲಿಯಾಗಿದ್ರು. ಆ ಬಳಿಕ ಎಚ್ಚೆತ್ತ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ 50 ವರ್ಷ ಮೇಲ್ಪಟ್ಟ ಪೊಲೀಸರು ಮನೆಯಲ್ಲಿ ಇರುವಂತೆ ವೇತನ ಸಹಿತ ರಜೆ ನೀಡಿದ್ದಾರೆ.

Comments are closed.