ಕರ್ನಾಟಕ

ಎಲ್ಲಾ ಪಕ್ಷಗಳ ಶಾಸಕರಿಂದ ಬೆಂಗಳೂರು ಮತ್ತೆ ಲಾಕ್​ಡೌನ್ ಗೆ ಒಮ್ಮತದ ಅಭಿಪ್ರಾಯ?

Pinterest LinkedIn Tumblr


ಬೆಂಗಳೂರು(ಜೂನ್ 24): ಮಹಾಮಾರಿ ಕೊರೋನಾ ರಾಜ್ಯದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ. ಇದೀಗ ಕೊರೋನಾ ಸೊಂಕಿತರ ಬಗ್ಗೆ ಶಾಸಕರೇ ಆತಂಕ ಗೊಂಡಿದ್ದಾರೆ. ಪ್ರಮುಖವಾಗಿ ಬೆಂಗಳೂರಂತ ನಗರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿಯಾಗ್ತಿದ್ರಿಂದ ಶಾಸಕರು ಕಳವಳಗೊಂಡು ಇದೀಗ ಲಾಕ್ ಡೌನ್ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಶಾಸಕರ ಅಭಿಪ್ರಾಯದ ಬಗ್ಗೆ ಮಾಹಿತಿ ಪಡೆದು ನಾಳೆ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಬೆಂಗಳೂರಲ್ಲಿ ಲಾಕ್ ಡೌನ್ ಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ತೀರ್ಮಾನ ವಾಗಲಿದೆ. ಈಗಾಗಲೇ ಸರ್ಕಾರ ಏನೇ ಕ್ರಮ ಕೈಗೊಂಡರೂ ಬೆಂಗಳೂರಲ್ಲಿ ಮಾತ್ರ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಯಾಗ್ತಿಲ್ಲ. ಜೊತೆಗೆ ಕೆಲ ಏರಿಯಾಗಳನ್ನು ಸೀಲ್ ಡೌನ್ ಮಾಡಿದ್ರೂ ಪ್ರಯೋಜನ ಆಗ್ತಿಲ್ಲ. ಇದೀಗ ಶಾಸಕರೇ ಲಾಕ್ ಡೌನ್ ಬಗ್ಗೆ ಒಲವು ತೋರುತ್ತಿರೋದ್ರಿಂದ ಸಿಎಂ ಬೆಂಗಳೂರನ್ನು ಲಾಕ್ ಡೌನ್ ಬಗ್ಗೆ ಒಂದು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

ಈಗಾಗಲೇ ಬೆಂಗಳೂರಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಸೇರಿದಂತೆ ಬಹುತೇಕ ಶಾಸಕರು ಲಾಕ್ ಡೌನ್ ಬಗ್ಗೆ ಒಲವು ತೋರಿದ್ದಾರೆ. ಇದೀಗ ಶಾಸಕರ ಅಭಿಪ್ರಾಯದ ಬಗ್ಗೆ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ನಾಳೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸಿಎಂ ಮುಂದಾಗಿದ್ದಾರೆ.

ಕೊರೋನಾ ಟ್ಯಾಸ್ಕ್ ಫೋರ್ಸ್ ತಜ್ಞರು ಕೂಡ ಕೊರೋನಾ ಬಗ್ಗೆ ಆತಂಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನಾ ಸುನಾಮಿ ರೀತಿ ಸಮುದಾಯದಲ್ಲಿ ಹರಡಬಹುದು ಎಂದು ಎಚ್ಚರಿಸಿದ್ದಾರೆ. ಇದೀಗ ಈ ವರದಿಗೆ ಸಿಎಂ ಬಿಎಸ್​ವೈ ಕೂಡ ಕಳವಳಗೊಂಡಿದ್ದು, ನಾಳೆ ಈ ಬಗ್ಗೆ ಪರಿಶೀಲಿಸಿ ಅಂತಿಮ ತೀರ್ಮಾನ ಮಾಡಲು ಮುಂದಾಗಿದ್ದಾರೆ.

ಒಟ್ಟಾರೆ ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆ ಅತ್ಯಂತ ಮಹತ್ವ ಪಡೆದಿದ್ದು, ಬೆಂಗಳೂರು ಲಾಕ್ ಡೌನ್ ಮಾಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಮಾಡಲಿದೆ.

Comments are closed.