ರಾಷ್ಟ್ರೀಯ

ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗದ ಕಾರಣ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ..!

Pinterest LinkedIn Tumblr

ಅಸ್ಸಾಂ: ಆನ್‌ಲೈನ್‌ ತರಗತಿಗೆ ಹಾಜರಾಗಲು ಸ್ಮಾರ್ಟ್‌ಫೋನ್‌ ಇಲ್ಲದ ಕಾರಣ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಡೆದಿದೆ.

ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಹದಿನಾರು ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ಆತನ ಮನೆಯ ಸಮೀಪ ಶವ ಪತ್ತೆಯಾಗಿದೆ. ಕಡು ಬಡತನದಲ್ಲಿರೋ ಮೃತ ವಿದ್ಯಾರ್ಥಿಯ ಮನೆಯವರಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ ಕೊಡುವ ಸಾಮರ್ಥ್ಯವಿರಲಿಲ್ಲ. ಇನ್ನೊಂದೆಡೆ ಆನ್‌ಲೈನ್‌ನಲ್ಲಿ ತರಗತಿಗಳು ಆರಂಭಗೊಂಡು ಪರೀಕ್ಷೆ ನಡೆಸುವ ಬಗ್ಗೆಯೂ ಶಾಲೆಯ ಮುಖ್ಯಸ್ಥರು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದ್ದರು.

ಕೊರೊನಾ ಹಿನ್ನೆಲೆ ಲಾಕ್‌ಡೌನ್ ಘೋಷಣೆಯಾದ ನಂತರ ಅಸ್ಸಾಂನ ಶಾಲೆಗಳು ಮುಚ್ಚಿದ್ದವು. ಹೀಗಾಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸಲು ತೀರ್ಮಾನಿಸಿತ್ತು. ತರಗತಿಗಳನ್ನು ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಪರೀಕ್ಷೆ ಬರೆಯಲೂ ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.

ಅತ್ಯಂತ ಕಡುಬಡತನದಲ್ಲಿರೋ ಮೃತ ವಿದ್ಯಾರ್ಥಿಯ ತಾಯಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಇತ್ತ ಆತನ ತಂದೆ ಕೂಡ ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿದಿದ್ದರು. ಹೀಗಾಗಿ ಆತನಿಗೆ ಫೋನ್ ಕೊಡಿಸಲು ಮನೆಯವರಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ತನ್ನ ನೆರೆಹೊರೆಯ ಸ್ನೇಹಿತರ ಬಳಿ ಅಳಲು ತೋಡಿಕೊಂಡಿದ್ದ ಎಂದು ಚಿರಾಂಗ್ ಜಿಲ್ಲೆಯ ಎಸ್‌ಪಿ ಸುಧಾಕರ್ ಸಿಂಗ್ ತಿಳಿಸಿದ್ದಾರೆ.

Comments are closed.