ಕರ್ನಾಟಕ

ಬೆಂಗಳೂರಿನಲ್ಲಿ ಕೊರೋನಾ ಭೀತಿಗೆ ಕೆಎಸ್ಆರ್​ಪಿ ಸಿಬ್ಬಂದಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಕೊರೋನಾ ಇದೆ ಎಂಬ ಭಯದಿಂದ ಕೆಎಸ್ಆರ್​ಪಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

50 ವರ್ಷದ ಕೆಎಸ್​ಆರ್​ಪಿ ಹೆಡ್​ ಕಾನ್ಸ್​​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಇವರಿಗೆ ಸೋಮವಾರ ಸಂಜೆ ಕೊರೋನಾ ಇರುವುದು ದೃಢವಾಗಿತ್ತು.

ಆತ್ಮಹತ್ಯೆಗೆ ಶರಣಾದ ಕಾನ್ಸ್​ಟೇಬಲ್ 4ನೇ ಬೆಟಾಲಿಯನ್ ಕೆಎಸ್ಆರ್​ಪಿ ಸಿಬ್ಬಂದಿಯಾಗಿದ್ದರು.

ಸೋಂಕಿತ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೇ ತಿಂಗಳ 20ರಂದು ಅವರಿಗೆ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು.

ಸೋಮವಾರ ಸಂಜೆ ವೈದ್ಯಕೀಯ ವರದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಕಮಾಡೆಂಟ್​ ಸೂಚಿಸಿದ್ದರು.

ಹೀಗಾಗಿ, ರಾತ್ರಿ ಸೋಂಕಿತ ಪೇದೆಯನ್ನು ಕೋರಮಂಗಲದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ವ್ಯಾನ್ ನಲ್ಲಿ ಸೋಂಕಿತ ಪೇದೆ ಹಿಂದೆ ಕುಳಿತಿದ್ದರೇ, ಮತ್ತೋರ್ವರು ವಾಹನ ಚಾಲನೆ ಮಾಡುತ್ತಿದ್ದರು.

ಬಸ್ಸಿನಲ್ಲೇ ಸೋಂಕಿತ ಪೇದೆ ತಾವು ಉಟ್ಟಿದ್ದ ಪಂಚೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯಾನ್ ಹಿಂಬದಿ ಕುಳಿತರೆ ಯಾರಿಗೂ ಸಹ ಗೊತ್ತಾಗುವುದಿಲ್ಲ.

ವ್ಯಾನ್ ವಿಕ್ಟೋರಿಯಾ ಆಸ್ಪತ್ರೆ ಬಳಿ ತಲುಪಿದಾಗ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಾತ್ರಿ ಸುಮಾರು10 ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ಸಿಲಿಕಾನ್ ಸಿಟಿಯ ಇಬ್ಬರೂ ಎಎಸ್ ಐ ಹಾಗೂ ಓರ್ವ ಹೆಡ್ ಕಾನ್ಸ್ ಟೇಬಲ್ ಸೋಂಕಿಗೆ ಬಲಿಯಾಗಿದ್ದರು.

Comments are closed.