ಬಾಲಿವುಡ್ನ ಹೀರೋಗಳ ಪೈಕಿ ವಿಭಿನ್ನವಾಗಿ ಗುರುತಿಸಿಕೊಂಡ ನಟ ಆಮೀರ್ ಖಾನ್. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಡಿಫರೆಂಟ್ ಆದಂತಹ ಚಿತ್ರಗಳ ಮೂಲಕವೂ ಅವರು ಜನರನ್ನು ರಂಜಿಸುತ್ತಾರೆ. ‘ತ್ರಿ ಈಡಿಯಟ್ಸ್’, ‘ಲಗಾನ್’, ‘ಪಿಕೆ’, ‘ದಂಗಲ್’ ಮುಂತಾದ ಸಿನಿಮಾಗಳು ಸಿನಿಪ್ರಿಯರ ಆಲ್ಟೈಮ್ ಫೇವರಿಟ್.
ಪ್ರತಿ ಚಿತ್ರದಲ್ಲಿಯೂ ಬೇರೆ ಬೇರೆ ಲುಕ್ನಲ್ಲಿ ಕಾಣಿಸಿಕೊಳ್ಳುವುದು ಆಮೀರ್ ಸ್ಪೆಷಾಲಿಟಿ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಅವರ ಟ್ರಾನ್ಸ್ಫಾರ್ಮೇಷನ್ ನೋಡುವುದೇ ಅಚ್ಚರಿ. ಪಾತ್ರಕ್ಕಾಗಿ ದೇಹದ ತೂಕದಲ್ಲಿ ಎಷ್ಟು ಏರಿಳಿತ ಬೇಕಾದರೂ ಮಾಡಿಕೊಳ್ಳಲು ಅವರು ಸದಾ ಸಿದ್ಧರಿರುತ್ತಾರೆ. ಅವರ ಆ ಲುಕ್ನ ಹಿಂದೆ ಮೇಕಪ್ ಕೈ ಚಳಕ ಕೂಡ ಇರುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಪ್ರಸ್ತುತ ಆಮೀರ್ ಖಾನ್ಗೆ 55 ವರ್ಷ ವಯಸ್ಸು. ಹಾಗಾದರೆ ಅವರು ಮೇಕಪ್ ಇಲ್ಲದೆ ಹೇಗೆ ಕಾಣಿಸಿಕೊಳ್ಳುತ್ತಾರೆ? ಆ ರಿಯಲ್ ಲೈಫ್ ಗೆಟಪ್ ಕಾಣಸಿಗುವುದು ಅಪರೂಪ. ಆದರೆ ಇತ್ತೀಚೆಗೆ ಅವರ ಪುತ್ರಿ ಇರಾ ಖಾನ್ ಶೇರ್ ಮಾಡಿಕೊಂಡಿರುವ ಒಂದು ಫೋಟೋದಲ್ಲಿ ಆಮೀರ್ ಅವರ ಮೇಕಪ್ ರಹಿತ ಲುಕ್ ಬಹಿರಂಗ ಆಗಿದೆ. ಅದು ಈಗ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ.
ಫಾದರ್ಸ್ ಡೇ ಪ್ರಯುಕ್ತ ಆಮೀರ್ ಖಾನ್ ಪುತ್ರಿ ಇರಾ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಶುಭಕೋರಿದ್ದರು. ಅಪ್ಪನ ಜೊತೆ ಹಾಯಾಗಿ ಕಾಲ ಕಳೆಯುತ್ತಿರುವ ಕ್ಷಣದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದರು. ಕಪ್ಪು ಬಣ್ಣದ ಟಿ ಶರ್ಟ್ ಮತ್ತು ಸ್ವೈರ್ ಸನ್ ಗ್ಲಾಸ್ ಧರಿಸಿರುವ ಆಮೀರ್ ಅವರು ಗ್ರೇ ಹೇರ್ ಸ್ಟೈಲ್ನಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಾವಿರಾರು ಲೈಕ್ಸ್ ಬಂದಿವೆ.
2018ರಲ್ಲಿ ತೆರೆಕಂಡ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾದ ಮೇಲೆ ಆಮೀರ್ ಖಾನ್ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. ಈಗ ‘ಲಾಲ್ ಸಿಂಗ್ ಚೆಡ್ಡಾ’ ಸಿನಿಮಾ ಕೆಲಸಗಳಲ್ಲಿ ಆಮೀರ್ ಬ್ಯುಸಿ ಆಗಿದ್ದಾರೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಇದಾಗಿದ್ದು, ಆಮೀರ್ಗೆ ಜೋಡಿಯಾಗಿ ಕರೀನಾ ಕಪೂರ್ ನಟಿಸುತ್ತಿದ್ದಾರೆ.
Comments are closed.