ಕರ್ನಾಟಕ

ಸಂಡೂರಿನಲ್ಲಿ 4 ತಿಂಗಳ ಮಗುವಿಗೆ ಕೊರೊನಾ: ಸೋಂಕಿನ ಮೂಲ ಗೊತ್ತಾಗದೆ ಕಂಗಾಲಾದ ಜಿಲ್ಲಾಡಳಿತ

Pinterest LinkedIn Tumblr


ಸಂಡೂರು (ಬಳ್ಳಾರಿ): ತಾಲೂಕಿನ ಚೋರನೂರು ಹೋಬಳಿಯ ಸೋವೇನಹಳ್ಳಿಯಲ್ಲಿ 2 ದಿನದ ಹಿಂದೆ 4 ತಿಂಗಳ ಮಗುವಿಗೆ ಕರೊನಾ ಸೋಂಕು ಧೃಢಪಟ್ಟಿದೆ. ಮಗುವಿಗೆ ತಗುಲಿದ ಸೋಂಕಿನ ಸಂಪರ್ಕದ ಮೂಲ ಈವರೆಗೆ ಪತ್ತೆಯಾಗದಿರುವುದು ಜಿಲ್ಲಾಡಳಿತ ಮತ್ತು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಕೊರೊನಾದ 416 ಪ್ರಕರಣಗಳ ಪೈಕಿ ತಾಲೂಕಿನಲ್ಲಿ 255 ಪ್ರಕರಣಗಳಿವೆ. ಜಿಂದಾಲ್‌ ಕಾರ್ಖಾನೆಯ ಸೋಂಕಿತರ ಸಂಪರ್ಕಿತ ಪ್ರಕರಣಗಳು 240ರ ಗಡಿ ದಾಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಸೋವೇನಹಳ್ಳಿಯಲ್ಲಿ ಜಿಂದಾಲ್‌ ಕಾರ್ಖಾನೆಗೆ ಅಪ್ರೆಂಟಿಸ್‌ ತರಬೇತಿಗೆ ತೆರಳುವ 8 ಯುವಕರು, ಅದಿರು ಸಾಗಣೆ ಮಾಡುವ ಲಾರಿಗಳ 15 ಚಾಲಕರು ಮತ್ತು ಕ್ಲೀನರ್‌ಗಳಿದ್ದಾರೆ. ಈ ಪೈಕಿ ಯಾರು ಯಾವಾಗ ಗ್ರಾಮಕ್ಕೆ ಬಂದು ಹೋದರು ಎಂಬ ಮಾಹಿತಿ ಈವರೆಗೆ ತಾಲೂಕು ಆಡಳಿತದಲ್ಲಿರದಿರುವುದು ಸೋಂಕು ಹರಡುವ ಆತಂಕಕ್ಕೆ ಕಾರಣವಾಗಿದೆ.

”ಮಗುವಿನ ಸಂಪರ್ಕದಲ್ಲಿನ 12 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. 5 ದಿನಗಳ ನಂತರ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸುತ್ತೇವೆ. ನಂತರ ಸೋಂಕಿನ ಮೂಲ ಗೊತ್ತಾಗುತ್ತದೆ” ಎಂದು ಡಿಎಚ್‌ಒ ಡಾ.ಜನಾರ್ಧನ್‌ ತಿಳಿಸಿದ್ದಾರೆ.

”ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಸೋಂಕಿತ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಡೀ ಗ್ರಾಮದಲ್ಲಿ ಸ್ಯಾನಿಟೈಜೇಷನ್‌, ಸ್ವಚ್ಛತೆ ಕೈಗೊಳ್ಳಲಾಗಿದೆ” ಎಂದು ಸೋವೇನಹಳ್ಳಿ ಗ್ರಾ.ಪಂ. ಪಿಡಿಒ ವಿಶ್ವನಾಥ ತಿಳಿಸಿದ್ದಾರೆ.

Comments are closed.