ನವದೆಹಲಿ: ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 2,532 ಹೊಸ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 59,377 ಆಗಿದ್ದರೆ ಸಾವಿನ ಸಂಖ್ಯೆ 53 ರಿಂದ 757 ಕ್ಕೆ ಏರಿದೆ. ರಾಜ್ಯದಲ್ಲಿಗ 25,863 ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದೆ.
ಇನ್ನೊಂದೆಡೆಗೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,413 ಹೊಸ ಪ್ರಕರಣಗಳ ಗರಿಷ್ಠ ಏಕದಿನ ಏರಿಕೆಯೊಂದಿಗೆ, COVID-19 ನ ಒಟ್ಟು ಸಂಖ್ಯೆ ಭಾನುವಾರ (ಜೂನ್ 21, 2020) 4 ಲಕ್ಷ ಗಡಿ ದಾಟಿದೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಟ್ಟು ಪ್ರಕರಣಗಳು 410461ಕ್ಕೆ ಏರಿದೆ, ಇದರಲ್ಲಿ 1,69,451 ಸಕ್ರಿಯ ಪ್ರಕರಣಗಳು ಮತ್ತು ಕನಿಷ್ಠ 2,27,756 ಜನರು ಸೋಂಕಿನಿಂದ ಗುಣ ಮುಖರಾಗಿದ್ದಾರೆ.ದೇಶದ ಒಟ್ಟು ಸಾವಿನ ಸಂಖ್ಯೆ 13,254 ಆಗಿದ್ದು, ಕಳೆದ 24 ಗಂಟೆಯಲ್ಲಿ 306 ಸಾವುಗಳು ಸಂಭವಿಸಿವೆ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ 55.48 ರಷ್ಟಿದೆ.ಮಹಾರಾಷ್ಟ್ರದಲ್ಲಿ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 1,28,205 ಕ್ಕೆ ಏರಿದರೆ, ದೆಹಲಿಯ ಒಟ್ಟು ಸಂಖ್ಯೆ 56,746 ಕ್ಕೆ ಏರಿದೆ.
ಒಟ್ಟು ದೃಢಪಡಿಸಿದ ಪ್ರಕರಣಗಳ ಪ್ರಕಾರ ಭಾರತವು ವಿಶ್ವದ ನಾಲ್ಕನೇ ಅತಿ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ, ಇದು ಯುಎಸ್, ಬ್ರೆಜಿಲ್ ಮತ್ತು ರಷ್ಯಾಕ್ಕಿಂತ ಸ್ವಲ್ಪ ಹಿಂದಿದೆ.
Comments are closed.