ಕರಾಚಿ; ಕೊರೋನಾ ವೈರಸ್ ಲಾಕ್’ಡೌನ್ ನಿಂದಾಗಿ ಪತ್ನಿ ಸಾನಿಯಾ ಮಿರ್ಜಾ ಹಾಗೂ ಮಗುವನ್ನು ನೋಡಲು ಹಾತೊರೆಯುತ್ತಿದ್ದ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್’ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿನಾಯಿತಿ ನೀಡಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ 29 ಆಟಗಾರರ ಪಾಕ್ ತಂಡದಲ್ಲಿ ಶೋಯೆಬ್ ಸ್ಥಾನ ಪಡೆದಿದ್ದಾರೆ. ಜೂ.28ಕ್ಕೆ ಪಾಕ್ ತಂಡ ಇಂಗ್ಲೆಂಡ್’ಗೆ ಚಾರ್ಟೆರ್ಡ್ ವಿಮಾನದಲ್ಲಿ ತೆರಳಿದೆ. ಆದರೆ, ಇಂಗ್ಲೆಂಡ್’ಗೆ ಶೋಯೆಬ್ ತಡವಾಗಿ ಬರಲು ಪಿಸಿಬಿ ಅನುಮತಿ ಕಲ್ಪಿಸಿದೆ.
ಈ ಅವಧಿಯಲ್ಲಿ ಶೋಯೆಬ್ ತಮ್ಮ ಪತ್ನಿ ಸಾನಿಯಾ ಹಾಗೂ ಮಗುವನ್ನು ನೋಡಲು ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿವೆ. 5 ತಿಂಗಳ ಬಳಿಕ ಶೋಯೆಬ್ ತಮ್ಮ ಪತ್ನಿಯನ್ನು ಭೇಟಿಯಾಗುತ್ತಿದ್ದಾರೆ.
Comments are closed.