ಮನೋರಂಜನೆ

ಸುಶಾಂತ್ ಸಿಂಗ್ ಆತ್ಮಹತ್ಯೆ ಕುರಿತು ಮೌನ ಮುರಿದ ಸಲ್ಮಾನ್ ಖಾನ್

Pinterest LinkedIn Tumblr


ಮುಂಬೈ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಆದರೆ, ಸುಶಾಂತ್ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕಳೆದ 6 ತಿಂಗಳಿನಿಂದ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಇದೇವೇಳೆ ಸುಶಾಂತ್ ಆತ್ಮಹತ್ಯೆಯ ಬಳಿಕ ಬಾಲಿವುಡ್ ನಲ್ಲಿ ನಡೆಯುತ್ತಿರುವ ನೆಪೋಟಿಸಂ ಕುರಿತು ಚರ್ಚೆ ಮತ್ತೊಮ್ಮೆ ಭುಗಿಲೆದ್ದಿದೆ. ಹಲವು ದಿಗ್ಗಜರು ಬಾಲಿವುಡ್ ನಲ್ಲಿ ನಡೆಯುತ್ತಿರುವ ನೆಪೋಟಿಸಂ ಕುರಿತು ಇದೀಗ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇವರಲ್ಲಿ ಕಂಗನಾ ರಣಾವತ್, ಸಾಹಿಲ್ ಖಾನ್, ಖ್ಯಾತ ನಿರ್ದೇಶಕ ಅಭಿಯವ್ ಕಶ್ಯಪ್ ಕೂಡ ಶಾಮೀಲಾಗಿದ್ದಾರೆ.

ಈ ಪರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹೆಚ್ಚಿಗೆ ಜನರು ಗುರಿಯಾಗಿಸುತ್ತಿದ್ದಾರೆ. ಆದರೆ, ಇದೀಗ ಟ್ವಿಟ್ಟರ್ ಮೇಲೆ ಒಂದು ಗುಂಪು ಸಲ್ಮಾನ್ ಖಾನ್ ಅವರ ಸಮರ್ಥನೆಗೆ ಇಳಿದಿದೆ. ಇವರಲ್ಲಿ ಬಾಲಿವುಡ್ ನ ಕೆಲ ನಟ-ನಟಿಯರು ಕೂಡ ಶಾಮೀಲಾಗಿದ್ದಾರೆ. ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೆ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ದಬಂಗ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಲ್ಮಾನ್, “ಈ ದುಃಖದ ಪರಿಸ್ಥಿತಿಯಲ್ಲಿ ಸುಶಾಂತ್ ಅವರ ಅಭಿಮಾನಿಗಳ ಬೆಂಬಲಕ್ಕೆ ನಿಲ್ಲಲು ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ಬೇಡಿಕೊಳ್ಳುತ್ತೇನೆ. ಭಾವನೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿ ಹಾಗೂ ಅಸಭ್ಯ ಭಾಷೆ ಬಳಸದಂತೆ ಕೇಳಿಕೊಳ್ಳುತ್ತೇನೆ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸುಶಾಂತ್ ಅವರ ಪೋಷಕರಿಗೆ ಸಾಂತ್ವನ ಹೇಳಬೇಕು, ಯಾವುದೇ ಓರ್ವ ಆತ್ಮೀನ ನಮ್ಮನ್ನು ಅಗಳುವುದು ತುಂಬಾ ದುಃಖದ ವಿಷಯವಾಗಿರುತ್ತದೆ ” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಹಾಗೂ ದಿ. ಜಿಯಾ ಖಾನ್ ಅವರ ತಾಯಿ ರಬಿಯಾ ಅಮೀನ್ ಅವರ ಹೇಳಿಕೆಯ ಬಳಿಕ, ಈ ವಿವಾದ ಮತ್ತಷ್ಟು ತಾರಕಕ್ಕೆ ಏರಿದೆ. ಆದರೆ, ಇನ್ನೊಂದೆಡೆ ಇದೀಗ ಹಲವು ನಟರು ಸಾಮಾಜಿಕ ಮಾಧ್ಯಮದಲ್ಲಿ ಸಲ್ಮಾನ್ ಖಾನ್ ಬೆಂಬಲಕ್ಕೆ ಇಳಿದಿದ್ದಾರೆ. ಖ್ಯಾತ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ಆಯುಶ್ ಸಿನ್ಹಾ, ಸಾಕೀಬ್ ಸಲೀಂ, ಜಹೀರ್ ಇಕ್ಬಾಲ್ ಹಾಗೂ ಸ್ನೇಹಾ ಉಳ್ಳಾಲ್ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ.

ಸೋನಾಕ್ಷಿ ಸಿನ್ಹಾ ‘ದಬಂಗ್’ ಹಾಗೂ ಸ್ನೇಹಾ ಉಳ್ಳಾಲ್ ‘ಲಕಿ : ನೋ ಟೈಮ್ ಫಾರ್ ಲವ್’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು. ಇನ್ನೊಂದೆಡೆ ಸಲ್ಮಾನ್ ಖಾನ್ ಅಳಿಯ ಆಯುಶ್ ಶರ್ಮಾ ‘ಲವ್ ರಾತ್ರಿ’ ಹಾಗೂ ಸಲ್ಮಾನ್ ಖಾನ್ ಅವರ ಆತ್ಮೀಯ ಗೆಳೆಯನ ಮಗ ಜಹೀರ್ ಇಕ್ಬಾಲ್ ‘ನೋಟ್ ಬುಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು. ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ಸಹೋದರ ಸಾಕೀಬ್ ಸಲೀಂ ಸಲ್ಮಾನ್ ಅಭಿನಯದ ‘ರೇಸ್ 3’ ನಲ್ಲಿ ಕೆಲಸ ಮಾಡಿದ್ದರು.

Comments are closed.