ಕರ್ನಾಟಕ

ವಿಕಾಸಸೌಧದ ಸಿಬ್ಬಂದಿಗೆ ಕೊರೋನಾ; ತಮ್ಮ ಕಚೇರಿಗಳತ್ತ ಮುಖ ಮಾಡದ ಮಂತ್ರಿಗಳು!

Pinterest LinkedIn Tumblr


ಬೆಂಗಳೂರು: ವಿಕಾಸಸೌಧದಲ್ಲಿನ ಆಹಾರ ಇಲಾಖೆಯ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ಬಂದ ಹಿನ್ನೆಲೆಯಲ್ಲಿ ಸಚಿವಾಲಯದ ಸಿಬ್ಬಂದಿಗಳಷ್ಟೇ ಅಲ್ಲ ಸಚಿವರುಗಳು ಭಯಭೀತರಾದಂತಿದೆ.

ವಿಕಾಸಸೌಧದಲ್ಲಿ ಕಚೇರಿ,ಕೊಠಡಿಗಳನ್ನ ಹೊಂದಿದ ಡಿಸಿಎಂ ಡಾ. ಅಶ್ವತ್ಥನಾರಾಯಣ, ಸಚಿವರಾದ ಎಸ್ ಟಿ ಸೋಮಶೇಖರ, ಸಿ.ಸಿ. ಪಾಟೀಲ, ಆನಂದ ಸಿಂಗ್, ಬಿ.ಸಿ. ಪಾಟೀಲ, ಪ್ರಭು ಚವ್ವಾಣ, ಶಶಿಕಲಾ ಜೊಲ್ಲೆ, ಮತ್ತೋರ್ವ ಡಿಸಿಎಂ ಲಕ್ಷ್ಮಣ ಸವದಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಯಾರೊಬ್ಬರು ತಂತಮ್ಮ ಕೊಠಡಿಗಳತ್ತ ಸುಳಿಯಲಿಲ್ಲ. ಇದೇ ವೇಳೆ, ಸೋಂಕಿತ ಮಹಿಳೆ ಕಾರ್ಯನಿರ್ವಹಿಸುತ್ತಿದ್ದ ನೆಲಮಹಡಿಯ ಕಚೇರಿ ಅಕ್ಕಪಕ್ಕದ ಐದಕ್ಕೂ ಹೆಚ್ಚು ಕೊಠಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಜೊತೆಗೆ‌ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಕ್ಕೆ ಸಾರ್ವಜನಿಕರ‌ ಪ್ರವೇಶ ನಿರ್ಬಂಧಿಸಲಾಗಿತ್ತು. ಪಾಸ್ ಹಾಗೂ ಸಂಬಂಧಪಟ್ಟ‌ ಜನಪ್ರತಿನಿಧಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಇಷ್ಟೇ ಅಲ್ಲದೇ, ವಿಧಾನಸೌಧದತ್ತವೂ ಸಚಿವರು ಸುಳಿಯಲಿಲ್ಲ. ಹಿರಿಯ, ಕಿರಿಯ ಸಚಿವರು, ಶಾಸಕರು ಶಕ್ತಿಸೌಧದತ್ತ‌ ಮುಖ ಮಾಡಲಿಲ್ಲ. ದಿನನಿತ್ಯಕ್ಕಿಂತ ಕಡಿಮೆ‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕೊರೋನಾ ವೈರಸ್ ಸಚಿವರಲ್ಲಿ ಹಾಗೂ ಸಚಿವಾಲಯದ ಸಿಬ್ಬಂದಿಯಲ್ಲಿ ಸಾಕಷ್ಡು ಭಯ ಹುಟ್ಟುಹಾಕಿದ್ದು ಇವತ್ತಿನ ಬೆಳವಣಿಗೆಯಿಂದ ಗೊತ್ತಾಗುತ್ತಿತ್ತು.

Comments are closed.