ಮನೋರಂಜನೆ

ಗಂಟೆಗೆ 1 ಲಕ್ಷ ರೂಪಾಯಿ ಸಂಭಾವನೆ ಕೇಳಿದ ಶ್ರುತಿ ಹಾಸನ್!

Pinterest LinkedIn Tumblr


ನಟಿ ಶುತ್ರಿ ಹಾಸನ್​ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಲಾಕ್​ಡೌನ್​ ಸಮಯದಲ್ಲಿ ಖರ್ಚಿಗೂ ಹಣವಿಲ್ಲದಂತಾಗಿದೆ, ಮಾಡಿದ ಸಾಲ ತೀರಿಸಬೇಕಾಗಿದೆ ಎಂಬ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಸುದ್ದಿಯಾಗಿತ್ತು. ಇದೀಗ ಶ್ರುತಿ ಹಾಸನ್​ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಗಂಟೆಗೆ 1 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ವೈರಲ್​ ಆಗಿದೆ.

ಶುತ್ರಿ ಹಾಸನ್​ ದೀರ್ಘ ವಿರಾಮದ ಬಳಿಕ ಟಾಲಿವುಡ್​ ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ವಕೀಲ್​ ಸಾಬ್​‘ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಎಂಟ್ರಿ ನೀಡಲಿದ್ದಾರೆ. ಅಂದು ಕೊಂಡತೆ ಆಗಿದ್ದರೆ ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆಬರುವುದು ಖಾತ್ರಿಯಾಗಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ನಿಂತುಹೋಗಿ ಅಂದುಕೊಂಡ ಯೋಜನೆಗಳು ಸ್ಥಗಿತಗೊಂಡಿದೆ.

‘ವಕೀಲ್​ ಸಾಬ್‘​ ಚಿತ್ರದಲ್ಲಿ ನಟಿ ಶ್ರುತಿ ಹಾಸನ್​ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಈ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಸದ್ಯ ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ನಿರ್ದೇಶಕರು ಶ್ರುತಿ ಹಾಸನ್​ಗೆ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರಂತೆ. ಆದರೆ ಶ್ರುತಿ ಹಾಸನ್​​ ಬೇಡಿಕೆ ಇಟ್ಟಿರುವ ಸಂಭಾವನೆಯನ್ನು ಕೇಳಿ ಅಚ್ಚರಿಗೊಂಡಿದ್ದಾರೆ ಎನ್ನಲಾಗಿದೆ.

ಶ್ರುತಿ ಹಾಸನ್​ 7 ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ 70 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಕೇಳಿಬಂದಿದೆ. ಅಂದರೆ ನಿರ್ದೇಶಕರು 1 ಗಂಟೆಗೆ 1 ಲಕ್ಷ ರೂಪಾಯಿ ನೀಡಿದಂತಾಗುತ್ತದೆ. ಆದರೆ ನಿರ್ಮಾಪಕರು ನಟಿಯ ಬೇಡಿಯನ್ನು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

‘ವಕೀಲ್​ ಸಾಬ್’​​ ಬಾಲಿವುಡ್​ ಪಿಂಕ್​ ಚಿತ್ರದ ರಿಮೇಕ್​. ಈ ಸಿನಿಮಾದಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ನಟಿಸಿದ್ದರು. ‘ವಕೀಲ್​ ಸಾಬ್’​ ಚಿತ್ರ ಪವನ್​ ಕಲ್ಯಾಣ್​ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.