ವಾಟ್ಸಾಪ್ ಮೆಸೆಂಜರ್ ಆಪ್ ಅನ್ನು ಕೇವಲ ಚಾಟ್ ಮಾಡಲು ಮಾತ್ರವಲ್ಲದೆ ವ್ಯವಹಾರವನ್ನು ಹೆಚ್ಚಿಸಲು ಸಹ ಬಳಸಬಹುದು. ಹೆಚ್ಚಿನ ಸಂಖ್ಯೆಯ ಜನರು ಇದೀಗ ವಾಟ್ಸಾಪ್ ಬಿಸಿನೆಸ್ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಇದಕ್ಕಾಗಿ ನೀವು ನಿಮ್ಮ ಪ್ರೊಫೈಲ್ ಅನ್ನು ರಚಿಸಬೇಕು, ನಿಮ್ಮ ಸರಕುಗಳು, ವ್ಯವಹಾರ, ವಿಳಾಸ ಮತ್ತು ವೆಬ್‌ಸೈಟ್ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ನಂತರ ನೀವು ಗ್ರಾಹಕರೊಂದಿಗೆ ನೇರವಾಗಿ ವಾಟ್ಸಾಪ್‌ನಲ್ಲಿ ಸಂಪರ್ಕ ಸಾಧಿಸಬಹುದು. ಅಷ್ಟೇ ಅಲ್ಲ, ಪ್ರತಿ ಗ್ರಾಹಕರಿಗೆ ತ್ವರಿತವಾಗಿ ಉತ್ತರಿಸಲು ನೀವು ನಿರಂತರವಾಗಿ ವಾಟ್ಸ್ ಆಪ್ ಬಳಸುತ್ತಲೇ ಇರಬೇಕು ಎಂಬ ಅಗತ್ಯತೆ ಕೂಡ ಇಲ್ಲ. ಈ ಅಪ್ಲಿಕೇಶನ್‌ನಲ್ಲಿ ಕಂಡುಬರುವ ಸ್ವಯಂ-ಪ್ರತ್ಯುತ್ತರ ವೈಶಿಷ್ಟ್ಯದೊಂದಿಗೆ, ನಿಮ್ಮ ಕೆಲಸವು ಮತ್ತಷ್ಟು ಸುಲಭವಾಗಲಿದೆ.
ವಾಟ್ಸ್ ಆಪ್ ನ ಈ ಹೊಸ ವೈಶಿಷ್ಟ್ಯ ಎಂದು ಮತ್ತು ಹೇಗೆ ಬಳಸಬೇಕು?
ವಾಟ್ಸ್ ಆಪ್ ಬಿಸಿನೆಸ್ ಆಪ್ ನಲ್ಲಿ ಬಳಕೆದಾರರಿಗೆ Away Messagesನ ಒಂದು ಆಯ್ಕೆ ಸಿಗಲಿದೆ. ಇದರಲ್ಲಿ ನೀವು ಪ್ರತ್ಯುತ್ತರ ನೀಡಲು ಯಾವುದೇ ಒಂದು ಸಂದೇಶವನ್ನು ಸೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ನಿಮ್ಮ ಆಟೋ ರಿಪ್ಲೈ ಯಾವ ಸಮಯಕ್ಕೆ ಹೋಗಬೇಕು ಎಂಬುದನ್ನೂ ಕೂಡ ನೀವು ಸೆಟ್ ಮಾಡಬಹುದು. ಈ ವೈಶಿಷ್ಟ್ಯವನ್ನು ಆಪ್ ನಲ್ಲಿ Away Hours ಎಂದು ಹೇಳಲಾಗಿದೆ. ಹಾಗಾದರೆ ಬನ್ನಿ ಇದನ್ನು ಹೇಗೆ ಬಳಸಬೇಕು ತಿಳಿಯೋಣ.
ಸ್ಟೆಪ್ 1: ಇದಕ್ಕಾಗಿ ಮೊದಲು ನೀವು ವಾಟ್ಸ್ ಆಪ್ ಬಿಸಿನೆಸ್ ಆಪ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ, ನಂತರ ಬಿಸಿನೆಸ್ ಸೆಟ್ಟಿಂಗ್ಸ್ ಗೆ ಭೇಟಿ ನೀಡಬೇಕು.
ಸ್ಟೆಪ್ 2: ಈಗ Away Message ಮೇಲೆ ಹೋಗಿ Send Away Message ಮೇಲೆ ಕ್ಲಿಕ್ಕಿಸಿ.
ಸ್ಟೆಪ್ 3: ಈಗ ಮೆಸೇಜ್ ನಲ್ಲಿ ಹೋಗಿ ಯಾವ ಮೆಸೇಜ್ ಅನ್ನು ಇನ್ನು ಆಟೋ ರಿಪ್ಲೈ ಆಗಿ ಕಳುಹಿಸಲು ಬಯಸುತ್ತಿರುವಿರೋ ಅದನ್ನು ಟೈಪ್ ಮಾಡಿ OK ಮೇಲೆ ಕ್ಲಿಕ್ಕಿಸಿ.
ಸ್ಟೆಪ್ 4: ಈಗ ನೀವು ನಿಮ್ಮ ಸಂದೇಶವನ್ನು ಯಾವಾಗ ಕಳುಹಿಸಲು ಬಯಸುತ್ತಿರುವಿರಿ ಎಂಬುದನ್ನು ನಿರ್ಧರಿಸಬೇಕು. ಇದರಲ್ಲಿ ನಿಮಗೆ ಮೂರು ಆಯ್ಕೆಗಳು ಸಿಗಲಿವೆ.
Always Send: ಒಂದು ವೇಳೆ ನೀವು ದೀರ್ಘಕಾಲದವರೆಗೆ ರಿಪ್ಲೈ ಮಾಡಲು ಲಭ್ಯವಿಲ್ಲ ಎಂದಾದಲ್ಲಿ ಈ ಆಯ್ಕೆ ಆಯ್ದುಕೊಳ್ಳಿ.
Custom Schedule: ಒಂದು ನಿಶ್ಚಿತ ಸಮಯಕ್ಕೆ ನೀವು ನಿಮ್ಮ ಸಂದೇಶವನ್ನು ಕಳುಹಿಸಲು ಬಯಸುತ್ತಿದ್ದರೆ ಈ ಆಯ್ಕೆಯನ್ನು ಆಯ್ದುಕೊಳ್ಳಿ.
Outside Of Business Hours: ನಿಮ್ಮ ವ್ಯವಹಾರದ ಅವಧಿ ಮುಕ್ತಾಯಗೊಂಡ ಸಮಯದಲ್ಲಿ ಆಟೋ ರಿಪ್ಲೇ ಮಾಡಲು ಬಯಸುತ್ತಿದ್ದರೆ ಈ ಆಯ್ಕೆಯನ್ನು ಆಯ್ದುಕೊಳ್ಳಿ.
ಸ್ಟೆಪ್ 5: ಈಗ ಯಾರಿಗೆ ನಿಮ್ಮ ಆಟೋ ಮೆಸೇಜ್ ತಲುಪಬೇಕು ಎಂಬುದನ್ನು ನೀವು ಆಯ್ಕೆ ಮಾಡಬೇಕು. ಇದರಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಸಿಗಲಿವೆ.
Everyone: ಈ ಆಯ್ಕೆಯನ್ನು ನೀವು ಬಳಸಿದರೆ, ಎಲ್ಲ ಜನರಿಗೆ ಆಟೋ ಸಂದೇಶ ರವಾನೆಯಾಗಲಿದೆ.
Everyone not in address book: ನಿಮಗೆ ಪರಿಚಯವಿಲ್ಲದ ನಂಬರ್ ಗಳಿಂದ ಬಂದ ಸಂದೇಶಗಳಿಗೆ ರಿಪ್ಲೈ ಮಾಡಲು ಈ ಆಯ್ಕೆ ಬಳಸಿ.
Everyone Except: ಯಾವ ಜನರಿಗೆ ನೀವು ಆಟೋ ರಿಪ್ಲೈ ಸಂದೇಶ ಕಳುಹಿಸಲು ಬಯಸುವುದಿಲ್ಲ ಎಂಬುದನ್ನು ನೀವು ಇಲ್ಲಿ ಆಯ್ಕೆಮಾಡಬಹುದು.
Only Send To: ಆ ಆಪ್ಶನ್ ಬಳಸಿ ನೀವು ಆಯ್ದ ಜನರಿಗೆ ಮಾತ್ರ ಆಟೋ ರಿಪ್ಲೈ ಮಾಡಬಹುದು.
Comments are closed.