ಕರ್ನಾಟಕ

ಒಬ್ಬ ವ್ಯಕ್ತಿಯಿಂದ ಧಾರವಾಡದ ಒಂದೇ ಹಳ್ಳಿಯ 23 ಮಂದಿಗೆ ಕೊರೋನಾ!

Pinterest LinkedIn Tumblr


ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟಗೊಂಡಿದ್ದು, ಸೋಮವಾರ ಒಂದೇ ದಿನ 34 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಒಬ್ಬ ವ್ಯಕ್ತಿಯಿಂದ ಒಂದೇ ಗ್ರಾಮದ 23 ಜನರಿಗೆ ಕೊರೋನಾ ಸೋಂಕು ತಗುಲಿದ ಘಟನೆಯೂ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ 23 ಜನರಿಗೆ ಕೊರೋನಾ‌ ಸೋಂಕು ಹಬ್ಬಿದೆ. ಮಗಳನ್ನು ಕರೆತರಲು ದೆಹಲಿಗೆ ಹೋಗಿದ್ದ ವ್ಯಕ್ತಿ ಬರುವಾಗ ಸೋಂಕಿತನಾಗಿ ಬಂದಿದ್ದ ಎನ್ನಲಾಗಿದ್ದು, ವ್ಯಕ್ತಿಯ ಮನೆಯ ನಾಲ್ವರಿಗೂ ಸೋಂಕು ತಗುಲಿದೆ.

ಸೋಂಕಿತ ವ್ಯಕ್ತಿಯಿಂದ ಗ್ರಾಮದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ, ಪಿ-6222 ನಿಂದಲೇ ಗ್ರಾಮದಲ್ಲಿ ಕೊರೋನಾ ಮಾಹಾಸ್ಪೋಟವಾಗಿದೆ.

ಉಳಿದಂತೆ ಪಿ-6255 ರಿಂದ ಮೂವರಿಗೆ ಸೋಂಕು, ಪಿ-6269 ನಿಂದ ಒಬ್ಬರಿಗೆ ಸೋಂಕು ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿದ ನಾಲ್ವರಿಗೆ ಸೋಂಕು ಮತ್ತು ಜಮ್ಮು-ಕಾಶ್ಮೀರ, ತೆಲಂಗಾಣ, ರಾಜಸ್ಥಾನದಿಂದ ಬಂದಿರುವವರಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

Comments are closed.