
ನೋಕಿಯಾ ಭಾರತೀಯ ಮಾರುಕಟ್ಟೆಗೆ ‘ನೋಕಿಯಾ 5310‘ 2020 ಆವೃತ್ತಿಯ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಈ ಫೋನಿನಲ್ಲಿ ಎಕ್ಸ್ಪ್ರೆಸ್ ಮ್ಯೂಸಿಕ್ ಮತ್ತು ಎಫ್ ರೇಡಿಯೋ ಅಳವಡಿಸಿದೆ.
ನೋಕಿಯಾ 5310 ಫೋನ್ನಲ್ಲಿ ಡ್ಯುಯೆಲ್ ಸಿಮ್ ಮತ್ತು ಡ್ಯುಯೆಲ್ ಸ್ಪೀಕರ್ ಅನ್ನು ಆಳವಡಿಸಿದೆ. ಮೆಮೆರಿ ಕಾರ್ಡ್ ಬಳಸುವ ಆಯ್ಕೆಯನ್ನು ನೀಡಿದೆ. 32GB ಮೆಮೆರಿಯನ್ನು ಬಳಸಬಹುದಾಗಿದೆ. ಜೊತೆಗೆ ಧೀರ್ಘಕಾಲದ ಬ್ಯಾಟರಿಯನ್ನು ನೀಡಿದೆ. ವಿಶೇಷವೆಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 22 ದಿನಗಳ ಕಾಲ ಬಳಸಬಹುದಾಗಿದೆ. ಜೂನ್ 23 ರಿಂದ ಈ ಫೋನ್ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.
ನೋಕಿಯಾ ಹೊಸ ವಿನ್ಯಾಸದಲ್ಲಿ 5310 ಫೋನ್ ಅನ್ನು ಬಿಡುಗಡೆ ಮಾಡಿದೆ. ಮ್ಯೂಸಿಕ್ ಪ್ಲೇಯರ್ ಅನ್ನು ನೀಡಿದೆ. ಜೊತೆಗೆ ಎಫ್ ರೇಡಿಯೋವನ್ನು ಆನಂದಿಸಬಹುದಾಗಿದೆ. ಅಧಿಕ ಸೌಂಡ್ಗಾಗಿ 2 ಸ್ಪೀಕರ್ ಅನ್ನು ಇದರಲ್ಲಿ ನೀಡಲಾಗಿದೆ. ಇಷ್ಟೆಲ್ಲಾ ಫೀಚರ್ ಅಳವಡಿಸಿರುವ ಫೋನ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
ಗ್ರಾಹಕರಿಗಾಗಿ ನೋಕಿಯಾ 5310 ಫೀಚರ್ ಫೋನ್ ಅನ್ನು 2 ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಕಪ್ಪು/ಕೆಂಪು ಮತ್ತು ಬಿಳಿ/ಕೆಂಪು ಬಣ್ಣದಲ್ಲಿ ಪರಿಚಯಿಸಿದೆ. ಇದರ ಬೆಲೆ 3,399 ಆಗಿದೆ.
Comments are closed.