ಕರ್ನಾಟಕ

ಮಂಡ್ಯದ ಯುವ ವಿಜ್ಞಾನಿಯಿಂದ ಕೊರೋನಾದಿಂದ ಪಾರಾಗುವ ಕಡಿಮೆ ಖರ್ಚಿನ ಯಂತ್ರ ಶೋಧನೆ

Pinterest LinkedIn Tumblr


ಮಂಡ್ಯ(ಜೂ.16): ಆತ ಅಪ್ಪಟ ಹಳ್ಳಿ ಪ್ರತಿಭೆ. ಮೇಲಾಗಿ ರೈತ ವಿಜ್ಞಾನಿ. ಈಗಾಗಲೇ ತನ್ನ ಹತ್ತು ಹಲವು ಸಂಶೋಧನೆ ಮೂಲಕ ಮಂಡ್ಯ ಜಿಲ್ಲೆಯಲ್ಲಿ ರೈತ ವಿಜ್ಞಾನಿ ಎಂದೇ ಪ್ರಸಿದ್ದಿ ಪಡೆದಿರುವ ವ್ಯಕ್ತಿ. ಕೇವಲ 8ನೇ ತರಗತಿಯಷ್ಟೆ ಓದಿರುವ ಈ ವ್ಯಕ್ತಿ ಇದೀಗ ಮತ್ತೊಂದು ಅವಿಷ್ಕಾರದ ಗಮನ ಸೆಳೆದಿದ್ದಾರೆ. ಈ ಮೂಲಕ ದೇಶದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾದಿಂದ ಪಾರಾಗುವ ಯಂತ್ರವೊಂದನ್ನ ಅಭಿವೃದ್ದಿಪಡಿಸಿ ಅದಕ್ಕೆ ಕಿಲ್ಲರ್ ಕೊರೋನಾ ಎಂದು ಹೆಸರಿಟ್ಟಿದ್ದಾರೆ.

ಅಂದ ಹಾಗೆ, ಈ ವ್ಯಕ್ತಿ ಹೆಸರು ರೋಬೋ ಮಂಜೇಗೌಡ ಅಂತ. ಮಂಡ್ಯ ಜಿಲ್ಲೆ ಕೆ.ಆರ್​​. ಪೇಟೆ ತಾಲೂಕಿನ‌ ಕೋಮನಹಳ್ಳಿ ಗ್ರಾಮದವರು.ಇವರು ಅಪ್ಪಟ ಹಳ್ಳಿ ಪ್ರತಿಭೆ. ‌ಓದಿರುವುದು ಕೇವಲ 8 ನೇ ತರಗತಿಯಾದರೂ ಸಹ ಇವರು ಸದಾ ತಮ್ಮ ಚಿಂತನಾಶೀಲತೆಯಿಂದ ಇದುವರೆಗೂ ಹಲವಾರು ಸಮಾಜಮುಖಿ ಯಂತ್ರಗಳನ್ನು ಆವಿಷ್ಕಾರ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ರೈತ ವಿಜ್ಞಾನಿ ಎಂದೇ ಪ್ರಸಿದ್ದಿಯಾಗಿದ್ದಾರೆ.

ಇವರು ಕೊಳವೆ ಬಾವಿಯಿಂದ ಬಿದ್ದವರನ್ನು ಮೇಲೆತ್ತಲು ಮೊದಲ ಬಾರಿಗೆ ರೋಬೋ ಒಂದನ್ನು ಅವಿಷ್ಕಾರ ಮಾಡಿ ರೋಬೋ ಮಂಜೇಗೌಡ ಅಂತಲೇ ಪ್ರಸಿದ್ದಿಯಾಗಿದ್ದಾರೆ. ಇವರು ನದಿಯಲ್ಲಿ‌ ಆಳದಲ್ಲಿರುವ ವಸ್ತು, ಬಿದ್ದ ವ್ಯಕ್ತಿಯನ್ನು ನೋಡಲು ಅನ್ವೇಷಕ ರೋಬೋ, ಗಡಿ ಕಾಯಲು ಸೈನಿಕ ರೋಬೋ, ಆಟೋಮೇಟಿಕ್ ರೈಲ್ವೆ ಸಿಗ್ನಲ್, ಸೆನ್ಸಾರ್ ಗೇಟ್, ವಾಟರ್ ವೀಲ್ಹ್ ಪವರ್ ಜನರೇಟರ್, ಸೇರಿದಂತೆ ಹತ್ತು ಹಲವು ಯಂತ್ರಗಳ ಅವಿಷ್ಕಾರ ಮಾಡಿದ್ದಾರೆ. ಇದೀಗ ತಮ್ಮ ಬುದ್ದಿವಂತಿಕೆಯಿಂದ ಕೊರೋನಾದಿಂದ ಪಾರಾಗುವ ಯಂತ್ರವನ್ನು‌ ಅಭಿವೃದ್ದಿ ಪಡಿಸಿ ದ್ದಾರೆ. ಈ ಮೂಲಕ ಕೊರೋನಾದಿಂದ ಪಾರಾಗುವ ಯಂತ್ರ ಕಂಡು ಹಿಡಿದಿದ್ದಾರೆ.

ಇವರು ಅಭಿವೃದ್ದಿ ಪಡಿಸಿರುವ ಈ ಚಿಕ್ಕ ಉಪಕರಣವನ್ನು‌ ಕೊರೋನಾದಿಂದ ಪಾರಾಗಲು ಬಳಸಬಹುದಾಗಿದ್ದು, ಕಡಿಮೆ ಖರ್ಚಿನಲ್ಲಿ‌ ಅಭಿವೃದ್ದಿಪಡಿಸಿದ್ದಾರೆ. ಇದರಲ್ಲಿ ಒಂದು ಚಿಕ್ಕ ಪೆಟ್ಟಿಯಲ್ಲಿಡಬಹುದಾದ ಉಪಕರಣ ಬಳಸಿದ್ದಾರೆ. ಆ ಉಪಕರಣಕ್ಕೆ ಆಯುರ್ವೇದ ಸಸ್ಯದಿಂದ ತಯಾರಿಸಿದ ತೈಲ ಬಳಸಿದ್ದಾರೆ. ಈ ಉಪಕರಣವನ್ನು ಅನುಭವದ ಜೊತೆ ವೈದ್ಯರಿಂದ ಸಲಹೆ ಕೂಡ ತೆಗೆದುಕೊಂಡು. ಇದನ್ನು ಅವಿಷ್ಕಾರ ಮಾಡಿ ಅದಕ್ಕೆ ಕೊರಓನಾ ಕಿಲ್ಲರ್ ಎಂದು ಹೆಸರನ್ನು ಇಟ್ಟಿದ್ದಾರೆ.

ಇನ್ನು ಇವರು ಸದಾ ತಮ್ಮ ಕ್ರಿಯಾಶೀಲತೆ ಮೂಲಕ ಸದಾ ಒಂದಲ್ಲ ಒಂದು ಸಮಾಜಮುಖಿ ಸಾಧನಗಳನ್ನು ಕಂಡು ಹಿಡಿದು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಈ ಗ್ರಾಮೀಣ ಪ್ರತಿಭೆಗೆ ಸ್ಥಳೀಯರು ಸೇರಿದಂತೆ ತಾಲೂಕಿನ ಜನ ಪ್ರತಿನಿನಿಧಿಗಳು ಹಾಗೂ ಅಧಿಕಾರಿಗಳು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌ ಈ ರೈತ ವಿಜ್ಞಾನಿಯ ಈ ಸಾಧನವನ್ನು ಸರ್ಕಾರ ಸಮಾಜಮುಖಿ ಕೆಲಸಕ್ಕೆ ಬಳಸಿಕೊಂಡು ಕೊರೋನಾ ನಿಯಂತ್ರ ಣ ಮಾಡುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಈ ರೈತ ವಿಜ್ಞಾನಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಮೂಲಕ‌ ರೈತ ವಿಜ್ಞಾನಿಯ ಸೇವೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Comments are closed.