ಕರ್ನಾಟಕ

ರಾಜ್ಯಸಭೆ ಟಿಕೆಟ್-ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಆಕ್ರೋಶ; ಕಾಂಗ್ರೆಸ್’ನತ್ತ ಮುಖಮಾಡಿದ್ದಾರಾ ಕತ್ತಿ ಸಹೋದರರು?

Pinterest LinkedIn Tumblr

ಬೆಂಗಳೂರು: ರಾಜ್ಯ ಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮದಿಂದ ಕತ್ತಿ ಸಹೋದರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ, ರಾಜ್ಯಸಭೆ ಟಿಕೆಟ್ ಅಥವಾ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಸದ್ಯ ಎರಡರಲ್ಲೂ ಅವಕಾಶ ಸಿಗದ ಕಾರಣ ಕತ್ತಿ ಬಣ ಮತ್ತಷ್ಟು ಸಿಟ್ಟಿಗೆದ್ದಿದೆ.

ತಮ್ಮ ಒಳಬೇಗುದಿಯನ್ನು ಮರೆ ಮಾಚಿದ್ದ ರಮೇಶ್ ಕತ್ತಿ ಮಂಗಳವಾರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಒಂದು ವೇಳೆ ತಮ್ಮ ಸಹೋದರನಿಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೇ ಕತ್ತಿ ಸಹೋದರರು ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆ ಚುನಾವಣೆಗೆ ನನಗೆ ಸೀಟು ಸಿಕ್ಕಿಲ್ಲ, ಸಿಎಂ ಯಡಿಯೂರಪ್ಪ ತಮ್ಮ ಸಹೋದರ ಉಮೇಶ್ ಕತ್ತಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿರುವುದಾಗಿ ತಿಳಿಸಿದ್ದಾರೆ, ನನಗೆ ರಾಜ್ಯ ಸಭೆ ಟಿಕೆಟ್ ಸಿಗಲಿಲ್ಲ ಎಂಬ ಮಾತ್ರಕ್ಕೆ ನಾನು ಪಕ್ಷದ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಅರ್ಥವಲ್ಲ ಎಂದು ರಮೇಶ್ ಕತ್ತಿ ಹೇಳಿದ್ದಾರೆ.

Comments are closed.