ಬೆಂಗಳೂರು (ಜೂ. 8): ಒಂದೆಡೆ ಲಾಕ್ಡೌನ್ ಸಡಿಲಿಕೆಯಿಂದಾಗಿ ರಾಜ್ಯಾದ್ಯಂತ ದೇವಸ್ಥಾನ, ರೆಸ್ಟೋರೆಂಟ್, ಹೋಟೆಲ್ಗಳನ್ನು ತೆರೆಯಲಾಗಿದೆ. ಇನ್ನೊಂದೆಡೆ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 308 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ 308 ಕೊರೋನಾ ಕೇಸ್ಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,760ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 387 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬೆಂಗಳೂರಿನ ಮೂವರು ಸೋಂಕಿತರು ಸಾವನ್ನಪ್ಪಿರುವ ವರದಿಯಾಗಿದೆ.
67 ವರ್ಷದ ಬೆಂಗಳೂರಿನ ಪುರುಷ ರೋಗಿ ಐಎಲ್ಐ, ಲಿವರ್ ಸಮಸ್ಯೆಗಳಿಂದ ಬಳಲುತ್ತಿದ್ದರು. ಜೂನ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ 48 ವರ್ಷದ ಮಹಿಳಾ ರೋಗಿ ಉಸಿರಾಟದ ಸಮಸ್ಯೆ ಮತ್ತು ಐಎಲ್ಐನಿಂದ ಬಳಲುತ್ತಿದ್ದರು. ಜೂನ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 5ರಂದು ಅವರು ಸಾವನ್ನಪ್ಪಿದರು. ಅವರ ವೈದ್ಯಕೀಯ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರಿನ ಇನ್ನೋರ್ವ 65 ವರ್ಷದ ಮಹಿಳೆ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಜೂನ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಜೂನ್ 5ರಂದು ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅದೇ ದಿನ ಅವರು ಸಾವನ್ನಪ್ಪಿದ್ದರು. ಇಂದು ವೈದ್ಯಕೀಯ ವರದಿ ಬಂದಿದ್ದು, ಕೊರೋನಾ ಸೋಂಕು ತಗುಲಿದ್ದು ಖಚಿತವಾಗಿದೆ.
ಇಂದು ಕಲಬುರ್ಗಿಯಲ್ಲಿ ಅತ್ಯಧಿಕ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಲಬುರ್ಗಿ- 99, ಯಾದಗಿರಿ- 66, ಬೀದರ್- 48, ಉಡುಪಿ- 45, ಬೆಂಗಳೂರು- 18, ಬಳ್ಳಾರಿ- 8, ಗದಗ-6, ಶಿವಮೊಗ್ಗ- 4, ಧಾರವಾಡ- 4, ಹಾಸನ- 3, ದಕ್ಷಿಣ ಕನ್ನಡ- 3, ಬಾಗಲಕೋಟೆ- 2, ಕೊಪ್ಪಳ- 1, ರಾಮನಗರ- 1 ಹೊಸ ಕೊರೋನಾ ಕೇಸ್ಗಳು ದೃಢಪಟ್ಟಿವೆ. ಇಂದು ಪತ್ತೆಯಾದ ಹೊಸ ಸೋಂಕಿತರಲ್ಲಿ ಕೂಡ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
Comments are closed.