ಕರ್ನಾಟಕ

ಧಾರ್ಮಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಷ್ಟ; ಬಾರ್​​ಗಳಲ್ಲಿ ಸುಲಭ; ಅಬಕಾರಿ ಸಚಿವ ಎಚ್​.ನಾಗೇಶ್​

Pinterest LinkedIn Tumblr


ಕೋಲಾರ(ಜೂ.04): ಕೊರೋನಾ ಲಾಕ್ ಡೌನ್ ಹಿನ್ನೆಲೆ ಹಂತ-ಹಂತವಾಗಿ ಎಲ್ಲಾ ಕ್ಷೇತ್ರಕ್ಕೂ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೂ ಅನುಮತಿ ನೀಡಿದೆ. ಆದರೆ ಬಾರ್ ಗಳನ್ನ ಮಾತ್ರ ತೆರೆಯಲು ಇನ್ನು ಅನುಮತಿ ನೀಡಿಲ್ಲ. ಜೂನ್ 8ರ ನಂತರ ಇದಕ್ಕೆ ಅನುಮತಿ ಸಿಗಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಬಾರ್ ಮಾಲೀಕರ ಜೊತೆಗೆ ಸಭೆ ನಡೆಸಿದ್ದ ಅಬಕಾರಿ ಸಚಿವ ನಾಗೇಶ್ ದೇಗುಲಕ್ಕೆ ಹೋಲಿಸಿ ಬಾರ್ ಗಳೇ ಸಾಮಾಜಿಕ ಅಂತರ ಕಾಪಾಡುವಲ್ಲಿ ಯಶಸ್ವಿಯಾಗಲಿದೆ ಎಂದು ನೀಡಿರುವ ಹೇಳಿಕೆ ವೈರಲ್ ಆಗಿದೆ.

ಬಾರ್ ಮಾಲೀಕರ ಎದುರು ಸಾಮಾಜಿಕ ಅಂತರ ವಿಚಾರವಾಗಿ ಮಾತನಾಡುವಾಗ ದೇಗುಲಗಳನ್ನು ಉದಾಹರಣೆಗೆ ನೀಡಿದ ಸಚಿವರು, ಧರ್ಮಸ್ಥಳ ಮತ್ತು ತಿರುಪತಿಗಳಲ್ಲಿ ನೂಕು ನುಗ್ಗಲು ಇರುತ್ತದೆ. ಅಲ್ಲಿ ಕೋವಿಡ್ ನಿಯಮದ ಪಾಲಿಸೋದಿಕ್ಕೆ ಕಷ್ಟವಾಗುತ್ತದೆ. ಆದರೆ ಬಾರ್ ಗಳಲ್ಲಿ ಅಂತರವನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ಸ್ಪಷ್ಟ ನಿಲುವನ್ನು ಅಬಕಾರಿ ಸಚಿವ ವ್ಯಕ್ತಪಡಿಸಿದ್ದಾರೆ.

ಲಾರಿ ಮಾರಿ ಕೊರೋನಾ ಸಂತ್ರಸ್ತರಿಗೆ ನೆರವಾದ ವ್ಯಕ್ತಿ; ಸಾವಿರಾರು ಜನರಿಗೆ ಆಹಾರ ವಿತರಿಸಿ ಹಸಿವು ನೀಗಿಸಿದ ಲಾರಿ ಮಾಲೀಕ

ಹೀಗಾಗಿ ದೇಗುಲಗಳನ್ನ ತೆರೆಯಲು ನಿರ್ಧರಿಸಿರುವ ಸರ್ಕಾರಕ್ಕೆ ಕೋವಿಡ್ – 19 ರ ನಿಯಮವನ್ನು ಕಾಪಾಡೋದಿಕ್ಕೆ ಅಸಾಧ್ಯ ಎನ್ನುವುದನ್ನು ಖುದ್ದು ಸಚಿವರೇ ಒಪ್ಪಿಕೊಂಡಂತಾಗಿದೆ. ದೇಗುಲದಲ್ಲಿ ಪೂಜೆ, ಮಸೀದಿಯಲ್ಲಿ ನಮಾಜು, ಷಾಪಿಂಗ್ ಮಾಲ್ ಗಳಲ್ಲಿ, ಪಾರ್ಕ್ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದಕ್ಕೆ ಕಷ್ಟವಾಗುತ್ತದೆ. ಆದರೆ ಬಾರ್ ಗಳಲ್ಲಿ ಟೇಬಲ್ ನಂತೆ ಬೆಸ್ಟ್ ವ್ಯವಸ್ಥೆ ಇರುವುದರಿಂದ ಅಂತರವನ್ನು ಕಾಪಾಡಬಹುದು ಎನ್ನುವುದು ಸಚಿವ ಎಚ್.ನಾಗೇಶ ಅವರ ಸಮರ್ಥನೆಯಾಗಿದೆ.

ಬೆಂಗಳೂರು ಅಬಕಾರಿ ಇಲಾಖೆಯ ಮುಖ್ಯ ಕಚೇರಿಯಲ್ಲಿ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಅಬಕಾರಿ ಸಚಿವರು ಈ ಸಮರ್ಥನೆಯನ್ನು ಕೊಟ್ಟಿದ್ದಾರೆ. ಕೋವಿಡ್ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಮದ್ಯ ಮಾರಾಟಗಾರರಿಗೆ ಸಹಾಯವಾಗುವಂತೆ ಗಂಭೀರವಾಗಿ ಪ್ರಯತ್ನ ನಡೆಸುತ್ತೇನೆ ಎಂದು ಸಚಿವರು ಅಭಯವನ್ನು ಕೊಟ್ಟಿದ್ದಾರೆ. ಜೂನ್ 8 ರಿಂದ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಅವಕಾಶ ಕೊಡುವ ಸಾಧ್ಯತೆಯಿದೆ. ಆದರೂ ಕೂಡಾ ದೆಹಲಿಯ ಮಟ್ಟದಲ್ಲಿ ಮದ್ಯ ಮಾರಾಟಗಾರರ ಸಂಘವನ್ನು ಸಂಪರ್ಕಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಸುವಂತೆ ಇಲ್ಲಿನ ಮದ್ಯ ಮಾರಾಟಗಾರರಿಗೆ ದಿವ್ಯವಾದ ಸಲಹೆಯನ್ನೂ ಸಚಿವರು ಕೊಟ್ಟಿದ್ದಾರೆ. ಸಭೆಯಲ್ಲಿ ಸಚಿವರು ಮಾತನಾಡಿರೋ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಪರ ವಿರೋದ ಚರ್ಚೆಗಳು ನಡೆಯುತ್ತಿದೆ.

Comments are closed.