ಬೆಂಗಳೂರು(ಜೂನ್. 01): ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೂ ಮಾಹಾಮಾರಿ ಕೊರೋನಾ ವಕ್ಕರಿಸಿದೆ. ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕರ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಡಿಜಿ ಕಚೇರಿಯಲ್ಲಿ ಆತಂಕವನ್ನ ಸೃಷ್ಟಿ ಮಾಡಿದೆ.
ಕೊರೋನಾ ವಾರಿಯರ್ಸ್‌ಗಳ ಮೇಲೂ ಮಾಹಾಮಾರಿ ದೃಷ್ಟಿ ನೆಟ್ಟಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಪೊಲೀಸ್ ಸಿಬ್ಬಂದಿ ಕೊರೋನಾಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದರು. ಮತ್ತೆ ಹೊಸ ಪ್ರಕರಣವೊಂದು ಪತ್ತೆಯಾಗಿದ್ದು, ಡಿಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗಾರ್ಡ್ ಗೆ ಪಾಸಿಟಿವ್ ವರದಿಯಾಗಿದೆ. ಸೋಂಕಿತ ವ್ಯಕ್ತಿ ಡಿಜಿ ಕಚೇರಿಯ ಹಿಂಬದಿ ಗೇಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇನ್ನೂ ಕಾನ್ಸ್‌ಟೇಬಲ್ ನೊಂದಿಗೆ ಡಿಜಿ ಕಚೇರಿಯ ನಾಲ್ವರು ಹಾಗೂ ಇತರೆಡೆ 20 ಜನ ಸಂಪರ್ಕವೊಂದಿದ್ದರು ಎನ್ನಲಾಗಿದ್ದು, ಅಷ್ಟು ಜನರನ್ನ ಕ್ವಾರಂಟೈನ್ ಮಾಡಲಾಗಿದೆ..
ಇನ್ನೂ ಸೋಂಕಿತ ಪೊಲೀಸ್ ಕಾನ್ಸ್‌ಟೇಬಲ್ ಡಿಜಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತನಿಂದ ಹಿರಿಯ ಆಧಿಕಾರಿಗಳು ಬಚಾವ್ ಆಗಿದ್ದಾರೆ ಎನ್ನಲಾಗಿದೆ. ಕಾನ್ಸ್‌ಟೇಬಲ್ ಆಧಿಕಾರಿಗಳ ಸಂಪರ್ಕಕ್ಕೆ ಬಾರದೇ ಇರುವುದರಿಂದ ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್ ಬೇಡ ಎನ್ನುವುದು ಆರೋಗ್ಯ ಇಲಾಖೆ ಆಧಿಕಾರಿಗಳ ಅಭಿಪ್ರಾಯ. ಅಲ್ಲದೇ 7 ದಿನಗಳ ಬಳಿಕ ಹಿರಿಯ ಆಧಿಕಾರಿಗಳು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನೂ ಸೋಂಕಿತ ಕಾನ್ಸ್‌ಟೇಬಲ್ ಉತ್ತರ ಕರ್ನಾಟಕದ ತನ್ನ ಊರಿಗೆ ತೆರಳಿ ನಂತರ ಡ್ಯೂಟಿಗೆ ಮರಳಿದ್ದ ಎನ್ನಲಾಗಿದೆ. ಕರ್ತವ್ಯಕ್ಕೆ ಬಂದ ಬಳಿಕ ಆತನಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಅನಂತರ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ರಂತೆ. ಈ ವೇಳೆ ಆತನಿಗೆ ಪಾಸಿಟಿವ್ ಬಂದಿದೆ. ಈ ಸಮದಲ್ಲಿ ಆತಂಕಕ್ಕೀಡಾದ ಆಧಿಕಾರಿಗಳು ಮತ್ತೊಮ್ಮೆ ಟೆಸ್ಟ್ ಮಾಡಿಸಿದ ಬಳಿಕ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸದ್ಯ ಪೊಲೀಸ್ ಕಾನ್ಸ್‌ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳ ಸ್ಯಾನಿಟೈಸರ್ ಮಾಡಿದ್ದು ಎಲ್ಲೆಡೆ ಸ್ವಚ್ಛಗೊಳಿಸುವ ಕಾರ್ಯ ಮುಂದುವರಿದಿದೆ.
Comments are closed.