ಕರ್ನಾಟಕ

ರಾಜ್ಯದಲ್ಲಿ ಶನಿವಾರ ಒಂದೇ ದಿನ 141 ಮಂದಿಗೆ ಕೊರೊನಾ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ ಒಟ್ಟು 141 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಶನಿವಾರದಿಂದ ದಿನದಲ್ಲಿ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್‌ ಬಿಡುಗಡೆ ಮಾಡಲು ನಿರ್ಧರಿಸಿದೆ. ಶನಿವಾರ ಸಂಜೆಯ ಹೆಲ್ತ್‌ ಬುಲೆಟಿನ್‌ನಲ್ಲಿ ಒಟ್ಟು 141 ಪ್ರಕರಣಗಳು ಡೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ.

ಇದುವೆರೆಗೆ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಒಟ್ಟು 49 ಮಂದಿ ಬಲಿಯಾಗಿದ್ದಾರೆ. ಇದುವರೆಗೆ 997ಮಂದಿ ಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. 1874 ಮಂದಿಯಲ್ಲಿ ಕೊರೊನಾ ವೈರಸ್‌ ಸಕ್ರಿಯವಾಗಿದೆ. ಶನಿವಾರ ಒಂದೇ ದಿನ 103 ಮಂದಿ ಸೋಂಕಿತರು ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 15 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ‌ ತಂಬಾಕು ಸೇವಿಸಿದರೆ ಐಪಿಸಿ ಸೆಕ್ಷನ್‌ ಅಡಿ ಕೇಸ್‌!

ಮಂಗಳವಾರ ದೃಢಪಟ್ಟಿರುವ 141ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. 90 ಜನ ಅಂತಾರಾಜ್ಯ ಪ್ರಯಾಣಿಕರಿದ್ದಾರೆ.

ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ 33 ಹೊಸ ಪ್ರಕರಣಗಳು ಖಚಿತವಾಗಿವೆ. ಯಾದಗಿರಿಯಲ್ಲಿ 18, ಕಲಬುರಗಿ 2, ಉಡುಪಿ 13, ಬೆಳಗಾವಿ 1, ದಾವಣಗೆರೆ 4, ಹಾಸನ 13, ಬೀದರ್ 10, ದಕ್ಷಿಣ ಕನ್ನಡ 14, ವಿಜಯಪುರ 11, ಮೈಸೂರು 2, ಉತ್ತರಕನ್ನಡ 2, ಧಾರವಾಡ 2, ಶಿವಮೊಗ್ಗ 6, ಚಿತ್ರದುರ್ಗದಲ್ಲಿ 1, ತುಮಕೂರು 1, ಕೋಲಾರ 3, ಬೆಂಗಳೂರು ಗ್ರಾಮೀಣ 1, ಹಾವೇರಿಯಲ್ಲಿ4 ಹೊಸ ಪ್ರಕರಣ ದೃಢಪಟ್ಟಿವೆ.

Comments are closed.