ಕರ್ನಾಟಕ

ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 192 ಕೊರೋನಾ ಕೇಸ್ ಪತ್ತೆ !

Pinterest LinkedIn Tumblr

ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಶುಕ್ರವಾರ ಕರಾಳವಾಗಿದೆ, ರಾಜ್ಯದಲ್ಲಿ ಪತ್ತೆಯಾದ 284 ಪ್ರಕರಣಳ ಪೈಕಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 192 ಕೇಸ್ ಪತ್ತೆಯಾಗಿವೆ.

ಒಟ್ಟಾರೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಅತೀ ಹೆಚ್ಚು 248 ಮಂದಿ ಸೋಂಕಿತರಾಗಿದ್ದಾರೆ. ಅಂತೆಯೇ ಅತೀ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿಗೆ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಗುರುವಾರ ಹೆಚ್ಚು ಸೋಂಕು ಪತ್ತೆಯಾಗಿ ಕರಾವಳಿ ಭಾಗದಲ್ಲಿ ಆತಂಕ ಮೂಡಿಸಿತ್ತು. ಶುಕ್ರವಾರ ಇದೇ ಮಹಾರಾಷ್ಟ್ರ ಮಹಾ ವಲಸೆ ಪ್ರಭಾವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮೇಲಾಗಿದೆ. ದಿನದ ಶೇ.75 ಸೋಂಕಿತರು ರಾಯಚೂರು (62), ಕಲಬುರಗಿ (61), ಯಾದಗಿರಿ(60) ಜಿಲ್ಲೆಗಳಲ್ಲಿಯೇ ವರದಿಯಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರು ಮತ್ತವರ ಅವರ ಕುಟುಂಬಸ್ಥರಾಗಿದ್ದಾರೆ.

ರಾಜ್ಯದ ಸೋಂಕು ಹೆಚ್ಚಳಕ್ಕೆ ಮಹಾರಾಷ್ಟ್ರ ಕೊಡುಗೆ ಮುಂದುವರಿದಿದೆ. ಶುಕ್ರವಾರ ದೃಢಪಟ್ಟ 248 ಪ್ರಕರಣದಲ್ಲಿ 227 ಮಂದಿ ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದವರು. ಈ ಪೈಕಿ ಮಹಾರಾಷ್ಟ್ರದಿಂದ ಅತೀ ಹೆಚ್ಚು 209 ಮಂದಿ, ನವದೆಹಲಿ 8 ಮಂದಿ, ರಾಜಸ್ಥಾನದಿಂದ 7 ಮಂದಿ, ಆಂಧ್ರಪ್ರದೇಶ ಮತ್ತು ತಮಿಳುನಾಡು, ಗುಜರಾತ್‌ನಿಂದ ತಲಾ ಒಬ್ಬರು ರಾಜ್ಯಕ್ಕೆ ಬಂದಿದ್ದಾರೆ.

Comments are closed.