ಕರ್ನಾಟಕ

ದಾವಣಗೆರೆ: 5 ದಿನದ ಗಂಡು ಮಗುವನ್ನು 5,000 ರೂ.ಗೆ ಮಾರಾಟ

Pinterest LinkedIn Tumblr


ದಾವಣಗೆರೆ: ಜಿಲ್ಲೆಯ ಮಹಿಳೆಯೊಬ್ಬರು ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೂಡಿ ತನ್ನ 5 ದಿನಗಳ ಗಂಡು ಮಗುವನ್ನು ಸಂಬಂಧಿಕರಿಬ್ಬರಿಗೆ 5,000 ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊನ್ನಾಳಿ ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಮಹಂತೇಜ್‌ ಪೂಜಾರ್‌ ದೂರಿನ ಮೇರೆಗೆ ಮಂಗಳವಾರ ತಡರಾತ್ರಿ ಪೊಲೀಸರು ಆರು ಜನರ ಮೇಲೆ ದೂರು ದಾಖಲಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಮೇ 20 ರಂದು ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಇದೇ ಮಹಿಳೆ ತನ್ನ ತಂಗಿ 39 ವರ್ಷದ ಲಾವಣ್ಯ ಮತ್ತು 36 ವರ್ಷದ ಅಣ್ಣೇಶ್‌ ನಾಯಕ್‌ ಎಂಬವರಿಗೆ ಮಂಗಳವಾರ ಮುಂಜಾನೆ ಹೊನ್ನಾಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಮಗುವನ್ನು ಮಾರಾಟ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊನ್ನಾಳಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ 44 ವರ್ಷದ ಕುಮಾರ್‌, ಡಿ ದರ್ಜೆ ನೌಕರ ಮಹೇಶ್‌, ಹಿರೇಕೆರೂರು ಆಸ್ಪತ್ರೆಯ ಲ್ಯಾಬ್‌ ಟೆಕ್ನೀಷಿಯನ್ 36 ವರ್ಷದ ಬಸವರಾಜ್‌, ಅಣ್ಣೇಶ್‌, ಲಾವಣ್ಯ ಮತ್ತು ಮಗುವಿನ ತಾಯಿಯನ್ನು ಎಫ್‌ಐಆರ್‌ನಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

Comments are closed.