
ಬೆಂಗಳೂರು: ರಾಜ್ಯ ಸರಕಾರ ಅಂದುಕೊಂಡಂತೆ 60 ಕೋವಿಡ್ ಪರೀಕ್ಷಾ ಲ್ಯಾಬ್ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಶಿಕ್ಷ ಣ ಸಚಿವ ಎಸ್.ಸುರೇಶ್ ಕುಮಾರ್, “ಮಾರ್ಚ್‌ನಲ್ಲಿ ಸೋಂಕು ಹರಡಲು ಶುರುವಾದಾಗ ಬೆರಳೆಣಿಕೆ ಲ್ಯಾಬ್‌ಗಳಷ್ಟೇ ರಾಜ್ಯದಲ್ಲಿದ್ದವು. ಈ ಎಲ್ಲ ಲ್ಯಾಬ್‌ಗಳೂ ಐಸಿಎಂಆರ್ ಮಾರ್ಗಸೂಚಿ ಅನುಸಾರವೇ ಇವೆ,” ಎಂದು ಹೇಳಿದರು.
“ರಾಜ್ಯದಲ್ಲಿ ಈವರೆಗೆ 1,79,397 ಪರೀಕ್ಷೆ ನಡೆಸಲಾಗಿದೆ. ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರವೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಔಷಧವನ್ನೂ ಒದಗಿಸಲಾಗುತ್ತಿದೆ,” ಎಂದರು.
ಲ್ಯಾಬ್‌ಗಳಿಗೂ ರಜೆ!
“ಮೇ 31ರೊಳಗೆ 60 ಲ್ಯಾಬ್‌ಗಳನ್ನು ಹೊಂದುವ ಕೇಂದ್ರ ಸರಕಾರ ನೀಡಿದ ಗುರಿಯನ್ನು ಮುಟ್ಟಿದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ 60ನೇ ಕೋವಿಡ್- 19 ಪರೀಕ್ಷಾ ಪ್ರಯೋಗಾಲಯ ಬೆಂಗಳೂರಿನ ಕಿಮ್ಸ್‌ನಲ್ಲಿ ಪ್ರಾರಂಭವಾಗಲಿದೆ. ಈ ಸಾಧನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು.”-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ (ಟ್ವೀಟ್)
“ನಿರಂತರ ಚಾಲನೆಯಲ್ಲಿರುವ ಲ್ಯಾಬ್‌ಗಳಿಗೆ ವಿರಾಮ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಹಾನ್ಸ್ ಹಾಗೂ ಬೆಂಗಳೂರಿನ ಮತ್ತೊಂದು ಲ್ಯಾಬ್‌ಗೆ 2 ದಿನ ರಜೆ ನೀಡಲಾಗಿತ್ತು. ಜತೆಗೆ ಈ ಲ್ಯಾಬ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ’’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಈ ವೇಳೆ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಸಮೀಕ್ಷೆ ನೋಟ
ಕೋವಿಡ್ ಹಿನ್ನೆಲೆಯಲ್ಲಿಆಶಾ ಕಾರ್ಯಕರ್ತೆಯರು 1.13 ಕೋಟಿ ಮನೆ ಭೇಟಿ ಕೊಟ್ಟು ಈವರೆಗೆ ಸಮೀಕ್ಷೆ ಕೈಗೊಂಡಿದ್ದಾರೆ ಎಂದು ಸುರೇಶ್‌ಕುಮಾರ್ ತಿಳಿಸಿದ್ದಾರೆ.
1,68,82,789 – ರಾಜ್ಯದಲ್ಲಿನ ಮನೆಗಳು
1,13,38,300 – (ಶೇ.67.16) ಮನೆಗಳಿಗೆ ಭೇಟಿ
48.35 – ಲಕ್ಷ ಹಿರಿಯ ನಾಗರಿಕರು
1.33 – ಲಕ್ಷ ಮಂದಿ ನಾನಾ ಖಾಯಿಲೆಯವರು
4,14,003 – ಗರ್ಭಿಣಿಯರು/ಬಾಣಂತಿಯರು
ಕೊಪ್ಪಳದಲ್ಲಿ ಶೇ.100ರಷ್ಟು ಸಮೀಕ್ಷೆಯಾಗಿದೆ.
ರಾಮನಗರದಲ್ಲಿ ಶೇ.16.73ರಷ್ಟು ಸಮೀಕ್ಷೆಯಾಗಿದೆ.
ಹೊರಗಿನಿಂದ ಬಂದವರ ಕ್ವಾರಂಟೈನ್
2,328 – ಮಂದಿ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದಾರೆ.
798 – ಇವರ ಪೈಕಿ ಪಂಚತಾರಾ ಹೋಟೆಲ್‌ನಲ್ಲಿ ಇರುವವರು
1,096 – ತ್ರಿ ಸ್ಟಾರ್ ಹೋಟೆಲ್‌ನಲ್ಲಿರುವವರು
434 – ಬಜೆಟ್ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾದವರು
Comments are closed.