ಕರ್ನಾಟಕ

ಮೈಸೂರಿನಲ್ಲಿ ಸರಳ ರಂಜಾನ್‌ ಆಚರಣೆ

Pinterest LinkedIn Tumblr


ಮೈಸೂರು: ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್‌ ನನ್ನು ಲಾಕ್ ಡೌನ್ ನಡುವೆಯೂ ಮುಸ್ಲಿಂ ಬಾಂಧವರು ತಮ್ಮ ಮನೆಗಳಲ್ಲಿ ಸರಳವಾಗಿ ಆಚರಿಸಿದರು. ಹಬ್ಬದ ಅಂಗವಾಗಿ ನಮಾಜ್ ನ್ನು ವಿಶೇಷವಾಗಿ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಆಚರಿಸಲಾಗುತ್ತಿತ್ತು. ಆದರೆ ಲಾಕ್ ಡೌನ್ ಕಾರಣ ನಮಾಜ್‌ ಗೆ ಅವಕಾಶ ನೀಡಿರಲಿಲ್ಲ.

ಮನೆಯಲ್ಲಿ ತಮ್ಮ ಬಂಧು ಬಾಂಧವರ ಜತೆ ನಮಾಜ್ ಮಾಡುವ ಮೂಲಕ ಹಬ್ಬ ಆಚರಿಸಿದರು. ಹಾಗಾಗಿ ಮುಸ್ಲಿಂ ಬಾಂಧವರಲ್ಲಿ ಸಂಭ್ರಮದ ಕೊರತೆ ಎದ್ದು ಕಾಣುತ್ತಿತ್ತು. ನಮಾಜ್‌ ಮಾಡಿ ಜನರು ನೇರವಾಗಿ ಖಬರಸ್ತಾನ್ (ಸ್ಮಶಾನ) ಗೆ ಆಗಮಿಸಿ ಮೃತ ಪಟ್ಟಿರುವ ತಮ್ಮ ಬಂಧು ಬಾಂಧವರ ಸಮಾಧಿ ಬಳಿ ಪ್ರಾರ್ಥನೆ ನಡೆಸುತ್ತಾರೆ. ಆದರೆ ಪೊಲೀಸರು ಈ ಕಾರ್ಯಕ್ರಮಕ್ಕೂ ಸಹ ಅವಕಾಶ ನೀಡಿರಲಿಲ್ಲ.

ಜನರು ಸೇರಬಹುದೆಂಬ ದೃಷ್ಟಿಯಿಂದ ಟಿಪ್ಪು ಸರ್ಕಲ್ ಬಳಿಯ ಬಡಾ ಮಕಾನ್ ಸೇರಿದಂತೆ ನಗರದ ಬಹುತೇಕ ಮುಸ್ಲಿಂ ಸ್ಮಶಾನದ ಬಳಿ ಪೊಲೀಸ್‌ ಟೈಟ್‌ ಸೆಕ್ಯೂರಿಟಿ ಹಾಕಲಾಗಿತ್ತು. ಮೈಸೂರಿನ ಈದ್ಗಾ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಈದ್ಗಾ ಮೈದಾನಕ್ಕೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.

Comments are closed.